ಕಾಶಿಪಟ್ಣ: ಮರ್ಹೂಮ್ ಆಲಿಯಬ್ಬ ಕಾಶಿಪಟ್ಣ ಇವರ ಎರಡನೇ ಪುತ್ರ ಮರ್ಹೂಮ್ ಮುಹಮ್ಮದ್ ಮತ್ತು ಮರ್ಹೂಮ ಝುಲೈಖಾ ದಂಪತಿಗಳ ಹಿರಿಯ ಪುತ್ರಿ ಆಇಶ ಮತ್ತು ಅಬ್ದುಲ್ ಕರೀಮ್ ಹಾಜಿ ದಂಪತಿಗಳ ವಿವಾಹದ ಸುವರ್ಣ ಮಹೋತ್ಸವದ ಅಂಗವಾಗಿ ಜ.14ರಂದು ಅತಿ ಕಡು ಬಡ ಎರಡು ಹೆಣ್ಣು ಮಕ್ಕಳ ಮದುವೆಯನ್ನು ಹಮ್ಮಿಕೊಂಡು ಇಡೀ ಸಮಾಜಕ್ಕೆ ಮಾದರೀ ಯೋಗ್ಯರೆನಿಸಿಕೊಂಡಿದ್ದಾರೆ.
ಬಹು ಕಾಜೂರ್ ತಂಙಳ್ ಹಾಗೂ ಉಲಮಾ ಸಾದಾತುಗಳ ಸಾನಿಧ್ಯದಲ್ಲಿ ನಡೆದ ಪ್ರಸ್ತುತ ಸಮಾರಂಭದಲ್ಲಿ ಬಹು ಅಬ್ದುಲ್ ಕರೀಂ ಹಾಜಿ ಯವರನ್ನು ಮರ್ಹೂಮ್ ಆಲಿಯಬ್ಬ ಕಾಶಿಪಟ್ಣ ಪುಳ್ಳಿ ಚಳ್ಳಿ ಫ್ಯಾಮಿಲಿ ವತಿಯಿಂದ ಸನ್ಮಾನಿಸಲಾಯಿತು.
ಪ್ರಸ್ತುತ ಫ್ಯಾಮಿಲಿಯ ಮುಖಂಡರಾದ ಆಲಿಯಬ್ಬ ಹಾಜಿ ಪುಲಾಬೆ.ಹೈದರ್ ಬೆಳ್ತಂಗಡಿ, ಅಬ್ದುಲ್ ಹಮೀದ್ ಪಡ್ಡಂದಡ್ಕ, ಇಸ್ಮಾಯಿಲ್ ಪಡ್ಡಂದಡ್ಕ, ಉಸ್ಮಾನ್ ಪಡ್ಡಂದಡ್ಕ, ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ಣ, ರಫೀಖ್ ಬೆಳ್ತಂಗಡಿ, ಕಲಂದರ್ ಬೆಳ್ತಂಗಡಿ, ಸಾದಿಖ್ ಬೆಳ್ತಂಗಡಿ, ಸೈಫುಲ್ಲಾ ಮರ್ಝೂಖಿ ಪುಲಾಬೆ ಮುಸ್ತಫಾ ಮುಈನಿ ಕಾಶಿಪಟ್ಣ ಹಾಗೂ ಯೂಸುಫ್ ಕಾಶಿಪಟ್ಣ, ಹಮೀದ್ ಕಾಶಿಪಟ್ಣ ಮುಂತಾದವರು ಉಪಸ್ಥಿತರಿದ್ದರು.