
ಕುಂಟಾಲಪಲ್ಕೆ: ಅಯೋಧ್ಯ ಪ್ರಭು ಶ್ರೀರಾಮ ಮಂದಿರದ ಲೋಕಾರ್ಪಣೆ ಪ್ರಯುಕ್ತ ಕಪಿಲ ಕೇಸರಿ ಯುವಕ ಮಂಡಲದ ವತಿಯಿಂದ ರಾಮೋತ್ಸವ ಮತ್ತು ಹೋಳಿಗೆ ಹಬ್ಬ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಷ್ಟೀಯ ಸ್ವಯಂ ಸೇವಾ ಸಂಘದ ಹಿರಿಯ ಕಾರ್ಯಕರ್ತರಾದ ಕೃಷ್ಣ ಭಟ್ ಕೊಕ್ಕಡ ಇವರು ಮಾತನಾಡಿ ಅಯೋಧ್ಯಯ ಹೋರಾಟದ ಬಗ್ಗೆ ಮಾತನಾಡಿ ಸಂಘ ಶಕ್ತಿಯ ಮಹತ್ವ ತಿಳಿಸಿದರು.
ಕಾರ್ಯಕ್ರಮದಲ್ಲಿ ಅರಿಕೆಗುಡ್ಡೆ ಬ್ರಹ್ಮಕಲಶದ ಅಧ್ಯಕ್ಷರು ಆಗಿರುವ ಪ್ರಕಾಶ್ ಪಿಲಿಕಬೆ ಮಾತನಾಡಿ ಶುಭ ಹಾರೈಸಿದರು. ಸಭಾ ಕಾರ್ಯಕ್ರಮದಲ್ಲಿ ಕಪಿಲ ಕೇಸರಿ ಹಿತೈಷಿಗಳಾದ ಅಶೋಕ್ ಭೀಡೆ, ಹತ್ಯಡ್ಕ ಸೇವಾ ಸಹಕಾರಿ ಸಂಘದ ಸದಸ್ಯರಾದ ಧರ್ಮರಾಜ ಗೌಡ ಅಡ್ಕಡಿ, ಹತ್ಯಡ್ಕ ಪಂಚಾಯತ್ ಸದಸ್ಯರಾದ ಪ್ರೇಮಚಂದ್ರ, ಕಪಿಲ ಕೇಸರಿ ಅಧ್ಯಕ್ಷರಾದ ರಾಜೇಶ್ ಗೌಡ ಬೊಳ್ಳೋಡಿ ಉಪಸ್ಥಿತರಿದ್ದರು.
ವ್ರಕ್ಷ ವರ್ಧನ್ ಗೋಖಲೆ ಪ್ರಾಸ್ತವಿಕ ನುಡಿಗಳಾಡಿದರು.ಸುಮಂತ್ ಗೌಡ ಅಳಕ್ಕೆ ಸ್ವಾಗತಿಸಿ ಅನ್ವಿತ್ ರೈ ವಂದಿಸಿದರು.ಶ್ರೀವತ್ಸ ಗೋಖಲೆ ಕಾರ್ಯಕ್ರಮ ನಿರೂಪಿಸಿದರು.
4 ತಂಡಗಳಿಂದ ಭಜನಾ ಕಾರ್ಯಕ್ರಮ ನಡೆದು ಹೋಳಿಗೆ ಹಬ್ಬ ಮತ್ತು ದೀಪಾವಳಿ ಹಬ್ಬ ಆಚರಿಸಲಾಯಿತು.