Site icon Suddi Belthangady

ರಾಮಮಂದಿರ ಪ್ರತಿಷ್ಠಾಪನಾ ದಿನ: ಬೆಳ್ತಂಗಡಿಯ ಹಿರಿಯ ಕರಸೇವಕ “ಜೈ ಶ್ರೀ ರಾಮ್” ಮೋಹನ್ ರಾವ್ ಅವರಿಗೆ ಗೌರವಾರ್ಪಣೆ

ಉಜಿರೆ: ಉರುವಾಲು ಗ್ರಾಮದ ಕುಪ್ಪೆಟ್ಟಿಯ ಶ್ರೀ ಗಣೇಶ ಭಜನಾ ಮಂಡಳಿಯ ಆಶ್ರಯದಲ್ಲಿ ರಾಮಮಂದಿರ ಪ್ರತಿಷ್ಠಾಪನಾ ಮಹೋತ್ಸವದ ಸವಿನೆನಪಿಗಾಗಿ ಬೆಳ್ತಂಗಡಿ ತಾಲೂಕಿನ ಹಿರಿಯ ಕರಸೇವಕ ಕಲ್ಮಂಜ ಮೋಹನ್ ರಾವ್ ಅವರನ್ನು ಗೌರವಪೂರ್ವಕವಾಗಿ ಪುಷ್ಪವೃಷ್ಠಿಯೊಂದಿಗೆ ಗೌರವಿಸಲಾಯಿತು.

ಯವ್ವನದ ತನ್ನ ದಿನಗಳಲ್ಲಿ ತನ್ನ ಮನೆಯನ್ನು ಹೆಚ್ಚು ಹಚ್ಚಿಕೊಳ್ಳದೆ ಹಿಂದೂ ಸಮಾಜವನ್ನು ಕಟ್ಟುವಲ್ಲಿ, ಕಲ್ಮಂಜ ಮೋಹನ್ ರಾವ್ ಅವರು ತಾಲೂಕಿನ ಪ್ರತಿ ಮನೆಯನ್ನು ಸಂಪರ್ಕಿಸಿದ್ದಲ್ಲದೆ ಅಯೋಧ್ಯೆಯ ಕರಸೇವೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.ಆ ನೆನಪಿಗಾಗಿ ಕುಪ್ಪೆಟ್ಟಿ ಭಜನಾ ಮಂಡಳಿಯ ಪರವಾಗಿ ಮಾರುತಿಪುರದ ರೈತಬಂಧು ಮಾಲಕರಾದ ಶಿವಶಂಕರ ನಾಯಕ್, ಉರುವಾಲಿನ ಹಿರಿಯರಾದ ತಿಲಕ್ ಯು ಹಾಗೂ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಯೋಗೀಶ್ ಕುಮಾರ್ ಕಡ್ತಿಲ ಹಾಗೂ ಇತರ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು ಹಾಗೂ ಉರುವಾಲು ಗ್ರಾಮದ ಕರಸೇವಕರಾದ ಜನಾರ್ದನ ಬೆಂಗೈ ಇವರನ್ನೂ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ವಾದ್ಯಕೋಡಿ ಸುಶೀಲ ಶಂಕರ ಭಟ್ಟ ಇವರ ನೇತೃತ್ವದಲ್ಲಿ ರಾಮತಾರಕ ಮಂತ್ರದೊಂದಿಗೆ ಭಜನೆಯು ಹಮ್ಮಿಕೊಳ್ಳಲಾಯಿತು.ಪ್ರಾಸ್ತಾವಿಕ ಮಾತುಗಳನ್ನು ಉಂಡೆಮನೆ ರಾಜಗೋಪಾಲ ಭಟ್ಟ ಅವರು ಮಾತನಾಡಿದರು.ರವಿಪ್ರಕಾಶ್ ವಾದ್ಯಕೋಡಿ ಅವರು ಕಾರ್ಯಕ್ರಮ ನಿರ್ವಹಿಸಿ, ಸುರೇಶ್ ಎಚ್ ಎಲ್ ವಂದನಾರ್ಪಣೆಗೈದರು.ಸಮಾರಂಭದಲ್ಲಿ ಕೃಷ್ಣಪ್ಪ ಗೌಡ, ಪ್ರವೀಣ್ ರೈ, ರೋಹಿತ್ ಶೆಟ್ಟಿ, ರಮೇಶ್ ಗೌಡ ಮುಂತಾದವರು ಉಪಸ್ಥಿತರಿದ್ದರು.

Exit mobile version