Site icon Suddi Belthangady

ಉಜಿರೆಯಲ್ಲಿ ಯಕ್ಷಭಾರತಿ ವತಿಯಿಂದ ಅಯೋಧ್ಯಾ ಕರಸೇವಕರಿಗೆ ಗೌರವಾರ್ಪಣೆ

ಉಜಿರೆ: 500 ವರ್ಷದ ಇತಿಹಾಸದಲ್ಲಿ ಲಕ್ಷಾಂತರ ಜನರ ಹೋರಾಟದ ಫಲವಾಗಿ ಇಂದು ಅಯೋಧ್ಯೆಯಲ್ಲಿ ಶ್ರೀ ರಾಮ ದೇವರ ಪ್ರತಿಷ್ಠಾಪನೆಯ ಸಾರ್ಥಕ ಕ್ಷಣಗಳನ್ನು ಅನುಭವಿಸುವ ಯೋಗ ಭಾಗ್ಯ ಇಡೀ ಭಾರತಕ್ಕೆ ಸಿಗುತ್ತಿದೆ. ಎಲ್ಲರ ಮನಸ್ಸು ರಾಮಮಯವಾಗಿದೆ. ಕಲ್ಪನೆಯಲ್ಲೂ ಕಾಣದ ಕನಸಿನಲ್ಲೂ ನೋಡದ ಜೀವಿತ ಕಾಲದಲ್ಲಿ ನೋಡುತ್ತೇವೆಂಬ ಆಲೋಚನೆಯನ್ನು ಮಾಡದ ನಾವು ರಾಮ ಮಂದಿರ ನಿರ್ಮಾಣದ ಸಂಭ್ರಮವನ್ನು ಅನುಭವಿಸುತ್ತಿದ್ದೇವೆ.

ಅಯೋಧ್ಯಾ ಕರಸೇವೆಯಲ್ಲಿ ನೇತೃತ್ವ ವಹಿಸಿ ಬೆಳ್ತಂಗಡಿ ತಾಲೂಕಿನ ಕರಸೇವಕರಿಗೆ ವಿಶ್ವಾಸ ತುಂಬಿಸಿ,ಒಗ್ಗೂಡಿಸಿ ಅವರಿಗೆ ಸ್ಫೂರ್ತಿ ತುಂಬಿದ ಅನೇಕರಲ್ಲಿ ಕಲ್ಮನ್ಜದ ಮೋಹನ ರಾವ್ ಪ್ರಮುಖರು. ಶ್ರದ್ಧೆ, ಭಕ್ತಿ, ನಂಬಿಕೆ ನಿರಂತರವಾಗಿದ್ದಾಗ ಫಲ ಕೂಡಿ ಬರುತ್ತದೆ ಎಂದು ವಿ.ಪ.ಸದಸ್ಯ ಪ್ರತಾಪಸಿಂಹ ನಾಯಕ್ ನುಡಿದರು.ಅವರು ಜ.21ರಂದು ಉಜಿರೆಯ ಶ್ರೀ ಶಾರದಾ ಮಂಟಪದಲ್ಲಿ ಯಕ್ಷಭಾರತಿ ಕನ್ಯಾಡಿಯ ದಶಮಾನೋತ್ಸವ ಪ್ರಯುಕ್ತ ಹಾಗು ಅಯೋಧ್ಯೆಯಲ್ಲಿ ಶ್ರೀ ರಾಮ ದೇವರ ಪ್ರತಿಷ್ಠಾಪನಾ ಮಹೋತ್ಸವದ ಸಂಭ್ರ ಮಾಚರಣೆ ಪ್ರಯುಕ್ತ ನಡೆದ ಸಮಾರಂಭದಲ್ಲಿ ಅಯೋಧ್ಯಾ ಕರಸೇವೆಯಲ್ಲಿ ಸಕ್ರಿಯರಾಗಿ ಭಾಗವಹಿಸಿದವರ ಪರವಾಗಿ ಕಲ್ಮನ್ಜ ಮೋಹನ ರಾವ್ ಅವರಿಗೆ ಗೌರವಾರ್ಪಣೆ ಸಲ್ಲಿಸಿ ಅಭಿನಂದಿಸಿದರು.

ವಿಶ್ವ ಹಿಂದೂ ಪರಿಷತ್, ಬೆಳ್ತಂಗಡಿ ರೋಟರಿ ಕ್ಲಬ್,ಲಯನ್ಸ್ ಕ್ಲಬ್ ಛತ್ರಪತಿ ಶಿವಾಜಿ ಸೇವಾ ಟ್ರಸ್ಟ್, ಹಿಂದೂ ಸೇವಾ ಸಮಿತಿ ಮೊದಲಾದ ಸಂಘಟನೆಗಳ ಪರವಾಗಿ ಕಲಾವತಿ ಮತ್ತು ಮೋಹನ ರಾವ್ ದಂಪತಿಗಳನ್ನು ವಿಶೇಷವಾಗಿ ಸನ್ಮಾನಿಸಿ, ಗೌರವಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರು ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪನೆ ವಿಶ್ವಕ್ಕೆ ಸಂಭ್ರಮದ ದಿನ.ಜತೆಗೆ ಉಜಿರೆಯ ರಥೋತ್ಸವದ ಸಂದರ್ಭದಲ್ಲಿ ಕರಸೇವಕರ ಪರವಾಗಿ ಹಿರಿಯರಾದ ಮೋಹನ ರಾವ್ ಅವರನ್ನು ಗೌರವಿಸಿರುವುದು ಸ್ತುತ್ಯಾರ್ಹ. ಶ್ರೀ ರಾಮ ಚರಿತಂಅರ್ಥಪೂರ್ಣ ಕಾರ್ಯಕ್ರಮವಾಗಿದ್ದು ಜೈ ಶ್ರೀ ರಾಂ ಘೋಷಣೆಯ ಹಿಂದಿರುವ ಅರ್ಥವನ್ನು ನಾವು ಕರಸೇವಕರಿಂದ ಕಲಿತುಕೊಂಡಿzವೆ ಎಂದರು. ವೇದಿಕೆಯಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆ,ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶ್ ಶೆಟ್ಟಿ,ಯಕ್ಷಭಾರತಿ ಅಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ, ಯಕ್ಷಕೂಟ ಮಧ್ವ ಅಧ್ಯಕ್ಷ ಭಾಸ್ಕರ ಶೆಟ್ಟಿ ಉಪಸ್ಥಿತರಿದ್ದರು.

ಗೌರವಾರ್ಪಣೆ ಸ್ವೀಕರಿಸಿದ ಮೋಹನ ರಾವ್ ಅವರು ತಮ್ಮ ಕರಸೇವೆಯ ದಿನಗಳನ್ನು ಸ್ಮರಿಸಿಕೊಂಡು, ಅನುಭವ ಹಂಚಿ ಮುಂದೆ ಕಾಶಿ ಹಾಗು ಮಥುರೆಯ ಪ್ರತಿಷ್ಠಾಪನಾ ಕಾರ್ಯ ನಡೆಸಬೇಕು. ಮಕ್ಕಳಿಗೆ ಹಿಂದುತ್ವದ ಜಾಗೃತಿಗೊಳಿಸಬೇಕು ಎಂದರು. ಮುರಳಿಕೃಷ್ಣ ಆಚಾರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಯಕ್ಷಭಾರತಿ ಅಧ್ಯಕ್ಷ ರಾ ಘವೇಂದ್ರ ಬೈಪಾಡಿತ್ತಾಯ ಸ್ವಾಗತಿಸಿ ,ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ವಂದಿಸಿದರು. ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ಅಯೋಧ್ಯಾ ಶ್ರೀ ರಾಮ ಚರಿತಂಪೌರಾಣಿಕ ಪ್ರಸಂಗದ ಯಕ್ಷಗಾನ ಬಯಲಾಟ ಪ್ರದರ್ಶಿಸಲ್ಪಟ್ಟಿತು.

Exit mobile version