ಇಂದಬೆಟ್ಟು ಗ್ರಾಮದ ನೇತ್ರಾವತಿ ನಗರ ನಾರಾಯಣ ಮುಗೇರ ಅವರ ಮನೆಯ ಬಳಿ ನಾಗರ ಹಾವೊಂದು ಕಾಣಿಸಿಕೊಂಡಿತ್ತು.ಸ್ಥಳೀಯ ಯುವಕರ ಕರೆಗೆ ಸ್ಪಂದಿಸಿದ ಕರೆಗೆ ಉರಗ ಪ್ರೇಮಿ ಪ್ರಸನ್ನ ಬಂಗಾಡಿ ತಕ್ಷಣ ಸ್ಥಳಕ್ಕೆ ತೆರಳಿ ಆ ನಾಗರ ಹಾವನ್ನು ಹಿಡಿದು ಸ್ಥಳೀಯ ಹುಡುಗರ ಸಹಕಾರದೊಂದಿಗೆ ಕಾಡಿಗೆ ಬಿಡುವಲ್ಲಿ ಯಶಸ್ವಿಯಾದರು.
ಆದರೆ 1 ಗಂಟೆಯ ನಂತರ ಅದೇ ಜಾಗದಲ್ಲಿ ಇನ್ನೊಂದು ಸುಮಾರು 7 ಅಡ್ಡಿಗಿಂತಲೂ ಉದ್ದವಿದ್ದ ಬ್ರಹತ್ ನಾಗರ ಹಾವೊಂದು ಅದೇ ಸ್ಥಳದಲ್ಲಿ ಇರುವುದಾಗಿ ಮತ್ತೆ ಕರೆ ಬಂತು.ಕರೆಗೆ ಓಗೊಟ್ಟ ಪ್ರಸನ್ನ ಬಂಗಾಡಿ ಮತ್ತೆ ಸ್ಥಳಕ್ಕೆ ಆಗಮಿಸಿ ಬ್ರಹದಾಕಾರದ 2ನೆಯ ನಾಗರ ಹಾವನ್ನೂ ಹಿಡಿದು ಸುರಕ್ಷಿತ ಪ್ರದೇಶಕ್ಕೆ ಬಿಡುವಲ್ಲಿ ಯಶಸ್ವಿಯಾದರು.
ವೃತ್ತಿಯಲ್ಲಿ ಅಡಿಕೆ ಸಿಪ್ಪೆ ತೆಗೆಯುವ ಕೆಲಸ ಮಾಡುವ ಇವರು ಅನೇಕ ವರ್ಷಗಳಿಂದ ಯಾವುದೇ ಸಂಭಾವನೆ ಪಡೆಯದೇ ಅನೇಕ ಹಾವುಗಳನ್ನು ರಕ್ಷಿಸುವುದು ವಿಶೇಷ ಎನ್ನಬಹುದು.
ಇವರ ತಮ್ಮನಾದ ಪ್ರದೀಪ್ ಬಂಗಾಡಿ ಕೂಡಾ ಅನೇಕ ಹಾವುಗಳನ್ನು ಹಿಡಿದು ರಕ್ಷಿಸಿದ್ದಾರೆ.