Site icon Suddi Belthangady

ಬರ್ಕಜೆಯಲ್ಲಿ ಫೆ.1 ರಿಂದ 5ರ ವರೆಗೆ ಜಾತ್ರ ಮಹೋತ್ಸವ- ನವಗುಳಿಗ ಕ್ಷೇತ್ರದಲ್ಲಿ 18ಗುಳಿಗಗಳ ಗಗ್ಗರ ಸೇವೆ

ವೇಣೂರು: ನಿಟ್ಟಡೆ ಗ್ರಾಮದ ಬರ್ಕಜೆ ಶ್ರೀ ದುರ್ಗಾಪರಮೇಶ್ವರಿ ಮತ್ತು ನವಗುಳಿಗ ಕ್ಷೇತ್ರದಲ್ಲಿ 9ನೇ ವರ್ಷದ ಜಾತ್ರಾ ಮಹೋತ್ಸವವು ಫೆ.1 ರಿಂದ ಫೆ.5 ರವರೆಗೆ ನಡೆಯಲಿದೆ.

ಫೆ.1ರಂದು ರಾತ್ರಿ ವಾಸ್ತು ಪೂಜೆ, ವಾಸ್ತು ಹೋಮ, ದಿಕ್ ಬಲಿ, ಫೆ.2 ರಂದು ನಾಗದೇವರ ಸನ್ನಿಧಿಯಲ್ಲಿ ನಾಗತಂಬಿಲ ಹಾಗೂ ದುರ್ಗಾದೇವಿ ಗುಡಿಯಲ್ಲಿ ಮಹಾ ಚಂಡಿಕಾ ಪೂಜೆ, ಫೆ.3ರಂದು 108 ಕಲಶಾಭಿಷೇಕ, ಗಣಹೋಮ, ರಂಗ ಪೂಜೆ ಹಾಗೂ ಮಧ್ಯಾಹ್ನ ಮಹಾಪೂಜೆ ಮತ್ತು ಅನ್ನಸಂತರ್ಪಣೆ, ಮಧ್ಯಾಹ್ನ 2.00ಗಂಟೆಯಿಂದ ಭಜನಾ ಕಾರ್ಯಕ್ರಮ ಹಾಗೂ 4.00 ಗಂಟೆಗೆ ವಿಶ್ವಾವಿಖ್ಯಾತ ಡಾ.ಸುಧಾಕರ್ ರವರಿಂದ ಜಾದೂ ಪ್ರದರ್ಶನ, ಸಂಜೆ 5 ಗಂಟೆಗೆ ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಕಲಾ ಸಿಂಚನ, ರಾತ್ರಿ 7 ಗಂಟೆಗೆ ಮಹಾಪೂಜೆ, ರಾತ್ರಿ 7.30 ಗಂಟೆಗೆ ವಿಠಲ ನಾಯಕ್ ಕಲ್ಲಡ್ಕರವರಿಂದ ವಿನೂತನ ಶೈಲಿಯ ಕಾರ್ಯಕ್ರಮ ಗೀತ ಸಾಹಿತ್ಯ ಸಂಭ್ರಮ ನಡೆಯಲಿದೆ.

ಫೆ.4 ಬೆಳಿಗ್ಗೆ 8 ಗಂಟೆಯಿಂದ ಪರಿವಾರ ದೈವಗಳ ಗಗ್ಗರ ಸೇವೆ, ಮೈಸಂದಾಯ, ದುಗಲಾಯ, ಪಂಜುರ್ಲಿ, ಮೈಯಂತಿ, ಮಂತ್ರದೇವತೆ, ಸನ್ಯಾಸಿ ಗುಳಿಗ, ಕೊರಗಜ್ಜ ಹಾಗೂ ಸಂಜೆ 6.00 ಗಂಟೆಗೆ ಕ್ಷೇತ್ರ ದಲ್ಲಿ ಪ್ರಪ್ರಥಮ ವಾಗಿ 18 ಗುಳಿಗಗಳ ಗಗ್ಗರ ಸೇವೆ ಹಾಗೂ ರಾತ್ರಿ 8.00 ಕ್ಕೆ ಅನ್ನಸಂತರ್ಪಣೆ ಮತ್ತು ರಾತ್ರಿ 9.00 ಗಂಟೆಗೆ ಶಿವದೂತ ಗುಳಿಗ ನಾಟಕ ನಡೆಯಲಿದೆ.

ಫೆ.5 ಪರಿವಾರ ದೈವಗಳ ಪರ್ವಸೇವೆ ನಡೆಯಲಿದೆ ಎಂದು ಕ್ಷೇತ್ರದ ಧರ್ಮದರ್ಶಿ ರಮೇಶ್ ಬರ್ಕಜೆ ರವರು ತಿಳಿಸಿದ್ದಾರೆ.

Exit mobile version