Site icon Suddi Belthangady

ರೂ.1.98 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಬೆಳ್ತಂಗಡಿ ಕಥೊಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನೂತನ ಸ್ವಂತ ಕಟ್ಟಡ ಶಿಲಾನ್ಯಾಸ

ಬೆಳ್ತಂಗಡಿ: ಕಳೆದ 25 ವರ್ಷಗಳ ಹಿಂದೆ ಸಮಾನ ಮನಸ್ಕರ ಸಹಕಾರದಿಂದ ಸ್ಥಾಪನೆಗೊಂಡ ಕಥೊಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಮಹತ್ತರವಾಗಿ ಬೆಳೆದಿದೆ.ಪ್ರತೀ ವರ್ಷ ಲಾಭಗಳಿಸಿ ಗ್ರಾಹಕರಿಗೆ ಡಿವಿಡೆಂಡ್ ನೀಡುತ್ತಾ ಬಂದಿದೆ.ಈ ಬಾರಿ ಬೆಳ್ಳಿಹಬ್ಬದ ಸವಿನೆನಪಿಗಾಗಿ ಶೇ.25% ಡಿವಿಡೆಂಡ್ ನೀಡಿದೆ.

ನಾರಾವಿ, ಅಳದಂಗಡಿ, ವೇಣೂರು ಮುಂತಾದ ಗ್ರಾಮೀಣ ಪ್ರದೇಶದಲ್ಲಿ ಶಾಖೆಗಳನ್ನು ಹೊಂದಿ ಸೇವೆ ನೀಡುತ್ತಾ ಬಂದಿದೆ.ನೂತನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯು ಪ್ರಗತಿಯಲ್ಲಿದ್ದು.ಕಟ್ಟಡ ರಸ್ತೆ ಮಾರ್ಜಿನ್ ಸಮಸ್ಯೆ ಎದುರಿಸುತ್ತಿದ್ದು ಹಾಗೂ ಸಂಘದ ಕಛೇರಿಯು ಬೆಳ್ಳಿಹಬ್ಬದ ಸವಿನೆನಪಿಗೋಸ್ಕರ ಸ್ವಂತ ಕಟ್ಟಡಕ್ಕೆ ಸ್ಥಳ ಖರೀದಿಸಿ ಜ.22ರಂದು ಬೆಳ್ತಂಗಡಿ ಮೂರು ಮಾರ್ಗದ ಬಳಿ ಇರುವ ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯ ರಸ್ತೆ ಬಳಿ ರೂ.1.98ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದ್ದು ಬೆಳ್ತಂಗಡಿ ಹೋಲಿ ರೆಡೀಮರ್ ಚರ್ಚ್ ಪ್ರಧಾನ ಧರ್ಮಗುರು ವ. ಫಾ. ವಾಲ್ಟ್ರರ್ ಡಿಮೆಲ್ಲೊ ಶಿಲಾನ್ಯಾಸ ನೆರವೇರಿಸಿ ಆಶೀರ್ವಚನಗೈದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಹೆನ್ರಿ ಲೋಬೊ, ಉಪಾಧ್ಯಕ್ಷ ಡೇನಿಸ್ ಸಿಕ್ವೇರಾ, ನಿರ್ದೇಶಕರಾದ ಜೇಮ್ಸ್ ಡಿಸೋಜಾ, ಜೋಸೆಫ್ ಸಲ್ಡಾನ, ಹೆರಾಲ್ಡ್ ಪಿಂಟೊ, ವಿನ್ಸೆಂಟ್ ಪಿಂಟೊ, ತೋಮಸ್ ನೊರೊನ್ಹಾ, ಪ್ರಸಾದ್ ಪಿಂಟೊ, ಅಲ್ಫೋನ್ಸ್ ರೊಡ್ರಿಗಸ್, ಪೌಲಿನ್ ರೇಗೊ, ಪ್ಲಾವಿಯಾ ಪೌಲ್, ರಿಯೋ ಡಿಸೋಜಾ, ಮುಖ್ಯ ಕಾರ್ಯನಿರ್ವಹಣಾದಿಕಾರಿ ಐವನ್ ಗೊನ್ಸಾಲ್ವಿಸ್, ಅಳದಂಗಡಿ ಶಾಖಾ ವ್ಯವಸ್ಥಾಪಕ ಜೆರೋಮ್ ಡಿಸೋಜಾ, ನಾರಾವಿ ಶಾಖಾ ವ್ಯವಸ್ಥಾಪಕ ವಾಲ್ಟರ್ ಡಿಸೋಜಾ, ಬೆಳ್ತಂಗಡಿ ಶಾಖಾ ವ್ಯವಸ್ಥಾಪಕಿ ಮಲ್ಲಿಕಾ ಮೋನಿಸ್, ವೇಣೂರು ಶಾಖಾ ವ್ಯವಸ್ಥಾಪಕಿ ಶಾಂತಿ ಸಿ.ಡಿ. ಎಲ್ಲಾ ಸಿಬಂದಿಗಳು, ಇಂಜಿನಿಯರ್ ಆಲೆನ್, ಗುತ್ತಿಗೆದಾರ ಮೆಲ್ವಿನ್ ಫೆರ್ನಾಂಡಿಸ್, ಪ್ರೇರಣಾ ಸೌವರ್ದ ಸಹಕಾರಿ ಮುಖ್ಯ ಕಾರ್ಯನಿರ್ವಣಾಧಿಕಾರಿ ಐರಿನ್ ರೊಡ್ರಿಗಸ್ ಮೊದಲಾದವರು ಉಪಸ್ಥಿತರಿದ್ದರು.

ಅಧ್ಯಕ್ಷ ಹೆನ್ರಿ ಲೋಬೊ ಸ್ವಾಗತಿಸಿದರು.ಉಪಾಧ್ಯಕ್ಷ ಡೇನಿಸ್ ಸಿಕ್ವೇರಾ ವಂದಿಸಿದರು.

Exit mobile version