Site icon Suddi Belthangady

ಬೆಳಾಲು ಅನಂತೋಡಿ ದೇವಸ್ಥಾನದಲ್ಲಿ ಅಭಿನಂದನಾ ಸಮಾರಂಭ

ಬೆಳಾಲು: ಇಲ್ಲಿಯ ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಕಳೆದ ತಿಂಗಳು ನಡೆದ ವಾರ್ಷಿಕ ಜಾತ್ರೋತ್ಸವದ ಯಶಸ್ವಿಗೆ ಕಾರಣಿಭೂತರಾದ ಎಲ್ಲಾ ಬೈಲುವಾರಿನ ಸದಸ್ಯರನ್ನು ಹಾಗೂ ವಿವಿಧ ಜಾತ್ರಾ ಉಪಸಮಿತಿಯ ಸದಸ್ಯರನ್ನು ಅಭಿನಂದಿಸುವ ಹಾಗೂ ಲೆಕ್ಕಪತ್ರ ಮಂಡಿಸುವ ಕಾರ್ಯಕ್ರಮ ಜ.21 ರಂದು ದೇವಸ್ಥಾನದ ಅನಂತ ಸದನದಲ್ಲಿ ನಡೆಯಿತು.

ಅಧ್ಯಕ್ಷತೆಯನ್ನು ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ದೇಜಪ್ಪ ಗೌಡ ಅರಣೆಮಾರು ವಹಿಸಿ ಮಾತನಾಡಿ ಈ ವರ್ಷದ ಜಾತ್ರೋತ್ಸವ ಎಲ್ಲರ ಸಹಕಾರದಿಂದ ಯಶಸ್ವಿಯಾಗಿದೆ.ಎಲ್ಲಾ ಉಪ ಸಮಿತಿಗಳ ಸಂಚಾಲಕರು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿದ್ದಾರೆ ಎಂದರು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನೋಟರಿ ವಕೀಲ ಶ್ರೀನಿವಾಸ ಗೌಡ ಮಾತನಾಡಿ ಎಲ್ಲರ ಹೊಂದಾಣಿಕೆಯ ಶ್ರಮದಿಂದ ಜಾತ್ರೆ ಯಶಸ್ವಿಯಾಗಿದೆ.ಇದರ ಅಂಗವಾಗಿ ನಡೆದ ಶ್ರಮದಾನದಲ್ಲಿ ಹೆಚ್ಚಿನ ಭಕ್ತರು ಪಾಲ್ಗೊಂಡು, ಅನ್ನದಾನ ಮತ್ತು ಹೂವಿನ ಅಲಂಕಾರ ಸೇವೆ ನೀಡಿ ಸಹಕಾರ ನೀಡಿದ ದಾನಿಗಳ ಸಹಕಾರವನ್ನು ಸ್ಮರಿಸಿ ಪ್ರತಿ ವರ್ಷ ಒಂದೊಂದು ಶಾಶ್ವತ ಯೋಜನೆ ಮಾಡುವಂತೆ ಈ ಬಾರಿ ದೇವರಿಗೆ ದಾನಿಗಳ ಸಹಕಾರದಿಂದ ದೇವರಿಗೆ ಪುಷ್ಪ ಕನ್ನಡಿ ಸಮರ್ಪಣೆಯಾಗಿದೆ ಎಂದರು.

ಬೆಳ್ತಂಗಡಿ ವಾಣಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಬೆಳಿಯಪ್ಪ ಗೌಡ ಅಭಿನಂದನಾ ಭಾಷಣ ಮಾಡಿದರು.

ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಮಹಿಳಾ ಸಮಿತಿಯ ಗೌರವಾಧ್ಯಕ್ಷೆ ವಿದ್ಯಾ ಶ್ರೀನಿವಾಸ ಗೌಡ, ಉಮೇಶ್ ಜಿ.ಎಂ.ಮಂಜೊತ್ತು ಅಭಿಪ್ರಾಯ ಹಂಚಿಕೊಂಡರು.

ದೇವಸ್ಥಾನದ ಆಡಳಿತ ಮೋಕ್ತೆಸರ ಜೀವಂದರ ಕುಮಾರ್ ಜೈನ್ ಬೆಳಾಲು ಗುತ್ತು, ಅಸ್ರನ್ನ ಗಿರೀಶ್ ಬಾರಿತ್ತಾಯ ಪಾರಳ, ವ್ಯವಸ್ಥಾಪನ ಸಮಿತಿಯ ಗೌರವ ಸಲಹೆಗಾರ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಎನ್.ಜತ್ತನ್ನ ಗೌಡ, ವ್ಯವಸ್ಥಾಪನಾ ಸಮಿತಿಯ ಉಪಾಧ್ಯಕ್ಷೆ ಮಮತಾ ದಿನೇಶ್ ಪೂಜಾರಿ ಉಪ್ಪಾರು, ಮಹಿಳಾ ಸಮಿತಿಯ ಅಧ್ಯಕ್ಷೆ ಹೇಮಲತಾ ಶ್ರೀನಿವಾಸ ಗೌಡ ಗಣಪನಗುತ್ತು, ಶ್ರೀ ಅನಂತೇಶ್ವರ ಭಜನಾ ಮಂಡಳಿ ಅಧ್ಯಕ್ಷ ನವೀನ ಕಂಬಳದಡ್ಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವ್ಯವಸ್ಥಾಪನಾ ಸಮಿತಿ, ಜಾತ್ರಾ ಸಮಿತಿ, ಭಕ್ತರು ಊರವರು ಹಾಜರಿದ್ದರು.ವ್ಯವಸ್ಥೆ ವ್ಯವಸ್ಥಾಪನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ದುರ್ಗಾಪ್ರಸಾದ್ ಕೆರ್ಮುಣ್ಣಾಯ ಸ್ವಾಗತಿಸಿ, ಕಾರ್ಯದರ್ಶಿ ಗ್ರಾಮ ಪಂಚಾಯತ್ ಸದಸ್ಯ ಸತೀಶ್ ಎಳ್ಳುಗದ್ದೆ ವಂದಿಸಿದರು.ಲೆಕ್ಕ ಪರಿಶೋಧಕ ಬೆಳಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನಾರಾಯಣ ಗೌಡ ಆಯ ವ್ಯಯ ಮಂಡಿಸಿದರು.

ದೇವಸ್ಥಾನದ ಕಚೇರಿ ಮೆನೇಜರ್ ಶಿವಪ್ರಸಾದ್ ಕೆ.ನಿರೂಪಿಸಿದರು.

Exit mobile version