ಬೆಳಾಲು: ಬೆಳಾಲಿನಲ್ಲಿ ಜರಗಿದ ಗಮಕ ಸಮ್ಮೇಳನವು ಮನೋಹರವಾಗಿ, ಕರ್ಣಾನಂದಕರವಾಗಿ ಸಮಾರೋಪಗೊಂಡಿತು.
ಗಮಕವು ಅದರದ್ದೇ ಆದ ಪ್ರೌಢಿಮೆ, ಅರ್ಥ ಮತ್ತು ಉದಾರತ್ವ ಇರುವಂತಹ ಕಲೆ. ಇದರ ಅಭ್ಯಾಸದಿಂದ ಮನಸ್ಸು ಶುದ್ಧಿ, ಉಚ್ಚಾರ ಸ್ಪಷ್ಟತೆ ಮತ್ತು ಕಾವ್ಯದ ರಸಾಸ್ವಾದ ಸಾಧ್ಯವಾಗುತ್ತದೆ.ವಿದ್ಯಾರ್ಥಿಗಳಲ್ಲಿ ಈ ಮೂಲಕ ಸಂಸ್ಕೃತಿ ಸಂಸ್ಕಾರ ನೀಡಬಹುದು ಎಂದು ಉಜಿರೆ ಶ್ರೀಧ ಮಂ ಕಾಲೇಜಿನ ಉಪನ್ಯಾಸಕರಾದ ಡಾ.ಶ್ರೀಧರ ಭಟ್ ರವರು ಮಾತನಾಡುತ್ತಾ, ಅದಕ್ಕಾಗಿ ಗಮಕ ಕಲೆಯು ಶಾಲಾ ಚಟುವಟಿಕೆಗಳ ಭಾಗವಾಗಬೇಕು ಎಂದು ತಿಳಿಸಿದರು.ಅವರು ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಜರಗಿದ ಬೆಳ್ತಂಗಡಿ ತಾಲೂಕು ದ್ವಿತೀಯ ಗಮಕ ಸಮ್ಮೇಳನದ ಸಮಾರೋಪ ಭಾಷಣಕಾರರಾಗಿ ಆಗಮಿಸಿದ್ದರು.
ಸಮ್ಮೇಳನಾಧ್ಯಕ್ಷತೆಯು ಗಮಕಿಗಳಿಗೆ ಸಂದ ಗೌರವ ಎನ್ನುತ್ತಾ ಉತ್ತಮವಾಗಿ ಆಯೋಜಿಸಲ್ಪಟ್ಟ ಸಮ್ಮೇಳನದ ಬಗ್ಗೆ ಅಭಿಮಾನವನ್ನು ಸರ್ವಾಧ್ಯಕ್ಷರಾದ ಜಯರಾಮ ಕುದ್ರೆತ್ತಾಯರವರು ಅನುಭವವನ್ನು ಹಂಚಿಕೊಂಡರು.
ಗಮಕ ಕಲಾ ಪರಿಷತ್ತು ಬೆಳ್ತಂಗಡಿ ತಾಲೂಕು ಇವರ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲೂಕು, ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆ, ಶಿಕ್ಷಕ ರಕ್ಷಕ ಸಂಘ, ಹಳೆ ವಿದ್ಯಾರ್ಥಿ ಸಂಘದವರ ಆಶ್ರಯದಲ್ಲಿ ಸಮ್ಮೇಳನ ಆಯೋಜನೆಗೊಂಡಿತು.
ಸಮಾರೋಪ ಸಮಾರಂಭವು ಗಮಕ ಕಲಾ ಪರಿಷತ್ತಿನ ದ.ಕ ಜಿಲ್ಲಾಧ್ಯಕ್ಷರಾದ ಮಧೂರು ಮೋಹನ ಕಲ್ಲೂರಾಯರ ಅಧ್ಯಕ್ಷತೆಯಲ್ಲಿ ಜರಗಿತು.
ಅತಿಥಿಗಳಾಗಿ ಆಗಮಿಸಿದ ಅನಂತೋಡಿ ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರು ಖ್ಯಾತ ನ್ಯಾಯವಾದಿಗಳೂ ಆಗಿರುವ ಶ್ರೀನಿವಾಸ ಗೌಡ ಬೆಳಾಲು, ಕೊಲ್ಪಾಡಿ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಅಧ್ಯಕ್ಷರಾದ ರಾಜಾರಾಮ ಶರ್ಮ ಕೊಲ್ಪಾಡಿಯವರು ಶುಭಹಾರೈಸಿದರು.
ವೇದಿಕೆಯಲ್ಲಿ ಮುಖ್ಯೋಪಾಧ್ಯಯ ರಾಮಕೃಷ್ಣ ಭಟ್ ಬೆಳಾಲು, ಪೋಷಕ ಸಂಘದ ಅಧ್ಯಕ್ಷ ಶೇಖರ ಗೌಡ ಕೊಲ್ಲಿಮಾರು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗಣೇಶ ಕನಿಕ್ಕಿಲ ಉಪಸ್ಥಿತರಿದ್ದರು.
ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಯದುಪತಿ ಗೌಡ ಸ್ವಾಗತಿಸಿ, ಗಮಕ ಕಲಾ ಪರಿಷತ್ತಿನ ತಾಲೂಕು ಅಧ್ಯಕ್ಷ ರಾಮಕೃಷ್ಣ ಭಟ್ ಉಜಿರೆ ವಂದಿಸಿದರು.ಗಮಕಿ ಸುವರ್ಣ ಕುಮಾರಿ ಕಾರ್ಯಕ್ರಮ ನಿರೂಪಿಸಿದರು.ಗಮಕ ಕಲಾ ಪರಿಷತ್ತಿನ ಕಾರ್ಯದರ್ಶಿ ಮೇಧಾ ಉಜಿರೆಯವರು ಸ್ಪರ್ಧೆಯ ಬಹುಮಾನದ ವಿಜೇತರ ವಿವರ ನೀಡಿದರು.
ರಮೇಶ ಮಯ್ಯ ಉಜಿರೆ, ವಿಜಯಕುಮಾರ್ ಕೊಯ್ಯೂರು, ಡಾ.ದಿವ ಕೊಕ್ಕಡ, ಸುಮನ್ ಯು ಎಸ್ ಬೆಳಾಲು ರವರು ವಿವಿಧ ಗೋಷ್ಠಿಗಳನ್ನು ಸಂಯೋಜಿಸಿದರು.
ವಿಶೇಷತೆ: ಬೆಳಾಲು ಗ್ರಾಮ ಪಂಚಾಯತ್, ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ, ಮಾಯ ಶ್ರೀ ಮಹಾದೇವ ದೇವಸ್ಥಾನ, ಕೊಲ್ಪಾಡಿ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ, ಅನಂತೋಡಿ ಶ್ರೀ ಅನಂತ ಪದ್ಮನಾಭ ದೇವಸ್ಥಾನ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರಿ. ಬೆಳಾಲು, ಹಾಲು ಉತ್ಪಾದಕರ ಸಹಕಾರ ಸಂಘ ಇವರ ಸಹಕಾರದೊಂದಿಗೆ ಸಮ್ಮೇಳನ ಯಶಸ್ವಿಯಾಯಿತು.