ಬೆಳ್ತಂಗಡಿ: ಅರಿವು ಕೃಷಿ ಕೇಂದ್ರ ಬೆಳ್ತಂಗಡಿ ಇದರ ವತಿಯಿಂದ ಉದ್ಯೋಗ ಆಕಾಂಕ್ಷಿಗಳಿಗೆ ಮತ್ತು ಸ್ವಂತ ಉದ್ಯಮ ಮಾಡುವವರಿಗೆ ಉದ್ಯಮಶೀಲತೆ, ಅಭಿವೃದ್ಧಿ ವಿಶೇಷ ಮಾಹಿತಿ ಕಾರ್ಯಗಾರ ಬೆಳ್ತಂಗಡಿ ಸುದ್ದಿ ಬಿಡುಗಡೆ ಕಚೇರಿಯ ಮಹಡಿಯಲ್ಲಿರುವ ಶ್ರೀ ಗುರುನಾರಾಯಣ ಸ್ವಾಮಿ ವಾಣಿಜ್ಯ ಸಂಕೀರ್ಣ ಸಭಾಭವನದಲ್ಲಿ ಜ.20ರಂದು ನಡೆಯುತ್ತಿದೆ.
ಅಧ್ಯಕ್ಷತೆ ವಹಿಸಿದ್ದ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ ಶಿವಾನಂದ, ಸಂಪನ್ಮೂಲ ವ್ಯಕ್ತಿಯಾಗಿದ್ದ ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣ ಉದ್ದಿಮೆಗಳ ಅಭಿವೃದ್ಧಿ ಯೋಜನೆ ದಕ್ಷಿಣ ಕನ್ನಡ ಜಿಲ್ಲೆ ಇದರ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸತೀಶ್ ಮಾಬೆನ್, ತಾಲೂಕು ಪಂಚಾಯತ್ ಸಂಯೋಜಕ ಜಯಾನಂದ, ಸುದ್ದಿ ಬಿಡುಗಡೆಯ ಸ್ಥಾನೀಯ ಸಂಪಾದಕ ಸಂತೋಷ್ ಕುಮಾರ್ ಶಾಂತಿನಗರ ಮತ್ತು ಹಿರಿಯ ವರದಿಗಾರ ಹೆರಾಲ್ಡ್ ಪಿಂಟೋ ಕಾರ್ಯಕ್ರಮ ದೀಪ ಬೆಳಗಿಸಿ ಉದ್ಘಾಟಿಸಿದರು.
ಬಳಿಕ ಸತೀಶ್ ಮಾಬೆನ್ ಮಾಹಿತಿ ನೀಡಿದರು.ಹಲವರು ಕಾರ್ಯಾಗಾರದಲ್ಲಿ ಭಾಗಿಯಾಗಿದ್ದರು.