Site icon Suddi Belthangady

ಖ್ಯಾತ ನೈನಾಡು ಪಿಂಟೊ ಬೇಕರಿ ಮಾಲಕ ಸಿಲ್ವೆಸ್ಟರ್ ಪಿಂಟೊ ಹೃದಯಾಘಾತದಿಂದ ನಿಧನ

ನೈನಾಡು: ಇಲ್ಲಿಯ ಪಿಂಟೊ ಬೇಕರಿ ಸಂಸ್ಥೆಯ (ನಯನ ಬ್ರಾಂಡ್ ) ಮಾಲಕ ಸಿಲ್ವೆಸ್ಟರ್ ಪಿಂಟೊ (62ವ.) ಜ.19ರಂದು ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೃತರು ಸುಮಾರು 41ವರ್ಷದಿಂದ ನೈನಾಡಿನಲ್ಲಿ ಪಿಂಟೊ ಬೇಕರಿ (ನಯನ )ಪ್ರಾರಂಭಿಸಿ ಲೈನ್ ಸೇಲ್ ಮಾಡಿ ಜನಾನುರಾಗಿಯಾಗಿದ್ದರು.ಇವರು ಹಲವರಿಗೆ ಉದ್ಯೋಗ ನೀಡಿ ಜೀವನ ನಡೆಸಲು ಸಹಕಾರಿಯಾಗಿದ್ದರು.

ಪ್ರಸ್ತುತ ಮಡಂತ್ಯಾರು, ವೇಣೂರು, ಮೂಡುಬಿದ್ರಿ, ವಾಮದಪದವು, ನೈನಾಡು ಮುಂತಾದ ಕಡೆ ಉದ್ಯಮ ಪ್ರಾಂಭಿಸಿದ್ದರು.ನೈನಾಡು ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾಗಿ ಎರಡು ಅವಧಿಯಲ್ಲಿ, ಮಡಂತ್ಯಾರು ಸಮನ್ವಯ ಸಹಕಾರಿ ಸಂಘದಲ್ಲಿ ನಿರ್ದೇಶಕರಾಗಿ, ನೈನಾಡು ನೂತನ ಚರ್ಚ್ ಕಟ್ಟಡ, ಶಾಲಾ ಕಟ್ಟಡ, ಹಾಲಿನ ಡೈರಿ ಸ್ಥಾಪಿಸುವಲ್ಲಿ ಸಕ್ರಿಯರಾಗಿದ್ದರು.

ಮೃತರು ಪತ್ನಿ ನತಾಲಿಯ ಗ್ರೇಸಿ ಪಿಂಟೊ, ಪುತ್ರ ನಿಲ್ವಿಸ್ಟರ್ ಗ್ಲ್ಯಾನ್ ಪಿಂಟೊ, ಪುತ್ರಿಯರಾದ ನೀತಾ ಸ್ಲಾವಿಯ ಮತ್ತು ನೀಶ್ಮಾ ಸರಿತಾ ಪಿಂಟೊ ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.

Exit mobile version