Site icon Suddi Belthangady

ಧರ್ಮಸ್ಥಳ: ಖಾಸಗಿ ಲಾಡ್ಜ್ ನಲ್ಲಿ ವೃದ್ಧ ಆತ್ಮಹತ್ಯೆ

ಬೆಳ್ತಂಗಡಿ: ಬೆಂಗಳೂರು ಉತ್ತರದ 06, 13 ನೇ ‘ಎ’ ಕ್ರಾಸ್, ಹೊಯ್ಸಳ ನಗರ, ಸುಂಕದಕಟ್ಟೆ ನಿವಾಸಿ ದಿ.ವೆಂಕಪ್ಪ ಯಾನೆ ಅಪ್ಪಣ್ಣ ಎಂಬವರ ಮಗನಾದ ಹೆಚ್.ವಿ.ಚಂದ್ರಶೇಖರ್ (89) ಎಂಬವರ ಮನೆಯಲ್ಲಿ ಕ್ಷುಲಕ ವಿಚಾರದಲ್ಲಿ ಮಕ್ಕಳ ಜೊತೆ ಗಲಾಟೆ ನಡೆದಿದ್ದು, ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬಂದು ಖಾಸಗಿ ಲಾಡ್ಜ್ ನಲ್ಲಿ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಸಕಾಲಕ್ಕೆ ಧರ್ಮಸ್ಥಳ ಪೊಲೀಸರು ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಿಸದೆ ಒಂದು ದಿನದ ಬಳಿಕ ವೃದ್ಧ ಸಾವನ್ನಪ್ಪಿದ್ದಾರೆ.ಪೊಲೀಸರು ಮನೆಯವರಿಗೆ ಕರೆ ಮಾಡಿ ಸಾವನ್ನಪ್ಪಿದ ವಿಚಾರ ತಿಳಿಸಿದರೂ ನಮಗೆ ತಂದೆ ಬೇಡ, ನಾವು ಬರುವುದಿಲ್ಲ ಎಂದಿದ್ದಾರೆ.ಈಗ ವೃದ್ಧನಿಗೆ ಐದು ಜನ ಮಕ್ಕಳಿದ್ದರೂ ವೃದ್ಧನ ಶವ ಮಂಗಳೂರು ಶವಗಾರದಲ್ಲಿ ಅನಾಥವಾಗಿದೆ.

ಹೆಚ್.ವಿ.ಚಂದ್ರಶೇಖರ್ ಎಂಬವರ ಮನೆಯಲ್ಲಿ ಕ್ಷುಲಕ ವಿಚಾರದಲ್ಲಿ ಗಲಾಟೆ ನಡೆದಿದೆ.ಈ ಗಲಾಟೆಯಿಂದ ನೊಂದು ಮನೆಬಿಟ್ಟು ಬೆಂಗಳೂರಿನಿಂದ ಬಸ್ ಮೂಲಕ ಧರ್ಮಸ್ಥಳಕ್ಕೆ ಬಂದು ನಂತರ ಜ.17 ರಂದು ಖಾಸಗಿ ಲಾಡ್ಜ್ ನಲ್ಲಿ ರೂಂ ಪಡೆದು, ರೂಂ ನಲ್ಲಿ ವಿಷ ಸೇವಿಸಿದ್ದಾರೆ.ಬಳಿಕ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದನ್ನು ರೂಂ ಬಾಯ್ ನೋಡಿ ತಕ್ಷಣ ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ತಕ್ಷಣ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸೆಕ್ಟರ್ ಅನಿಲ್‌ ಕುಮಾ‌ರ್ ಮತ್ತು ತಂಡ ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಿಸದೆ ಜ.18 ರಂದು ಮಧ್ಯಾಹ್ನ ಮೃತಪಟ್ಟಿದ್ದಾರೆ.

ಧರ್ಮಸ್ಥಳ ಪೊಲೀಸರು ಮೃತಪಟ್ಟ ವೃದ್ಧನ ಬ್ಯಾಗ್ ನಲ್ಲಿದ್ದ ಚೀಟಿ ಹಾಗೂ ಆಧಾರ್ ಕಾರ್ಡ್ ಮೂಲಕ ಮನೆಯವರನ್ನು ಸಂಪರ್ಕಿಸಿ ಸಾವನ್ನಪ್ಪಿದ ವಿಚಾರವನ್ನು ತಿಳಿಸಿದಾಗ ನಮಗೆ ನಮ್ಮ ತಂದೆ ಬೇಡ, ಅವರ ಶವ ನಾವು ತರಲು ಬರುವುದಿಲ್ಲ ಎಂದು ಹೇಳುತ್ತಿದ್ದಾರೆ.

ಧರ್ಮಸ್ಥಳ ಪೊಲೀಸರು ಐದು ಜನ ಮಕ್ಕಳನ್ನು ಸಂಪರ್ಕಿಸಿದರೂ ಯಾರು ಕೂಡ ಮೃತದೇಹ ಪಡೆದುಕೊಳ್ಳಲು ಬರುವುದಕ್ಕೆ ನಿರಾಕರಿಸುತ್ತಿದ್ದು, ಮೃತದೇಹ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಅನಾಥವಾಗಿದೆ.

Exit mobile version