Site icon Suddi Belthangady

ಪುಂಜಾಲಕಟ್ಟೆ ಬುರೂಜ್ ಶಾಲೆಗೆ ಚಿಂತನಾ ಇಂಗ್ಲೀಷ್ ಗ್ರಾಮರ್ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದ ಪ್ರಶಸ್ತಿ

ಪುಂಜಾಲಕಟ್ಟೆ: ಬುರೂಜ್ ಆಂಗ್ಲ ಮಾಧ್ಯಮ ಫ್ರೌಡಶಾಲೆ ರಝಾನಗರ ಇಲ್ಲಿಯ ವಿದ್ಯಾರ್ಥಿಗಳು ನವೋದಯ ಪ್ರಕಾಶನ ಚಿತ್ರದುರ್ಗದವರು ಸಂಘಟಿಸಿರುವ ಚಿಂತನಾ ಇಂಗ್ಲೀಷ್ ಗ್ರಾಮರ್ ಸ್ಪರ್ಧಾ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದಿರುತ್ತಾರೆ.

ಬುರೂಜ್ ಶಾಲೆ “ಉತ್ತಮ ರಾಜ್ಯ ಶಾಲೆ”ಎಂಬ ಮನ್ನಣೆಗೆ ಪಾತ್ರವಾಗಿದ್ದು, ಮಾರ್ಗದರ್ಶಿ ಶಿಕ್ಷಕಿಗೆ “ಬೆಸ್ಟ್ ಗೈಡ್ ಶಿಕ್ಷಕಿ” ಎಂಬ ಪ್ರಶಸ್ತಿ ದೊರಕಿದೆ.

ನಾಲ್ಕನೇ ತರಗತಿಯ ರಿನ್ಸನ್ ಫ್ರಾನ್ಸಿಸ್ ಲಸ್ರಾದೋ ರಾಷ್ಟ್ರ ಮಟ್ಟದಲ್ಲಿ ಪ್ರಥಮ, ಎಂಟನೇ ತರಗತಿಯ ಆಯಿಷತುಲ್ ಮುಶ್ಪಿಯಾ ರಾಜ್ಯ ಮಟ್ಟದಲ್ಲಿ ಪ್ರಥಮ, ಐದನೇ ತರಗತಿಯ ಅದ್ವಿಕ್ ಜೈನ್ ಜಿಲ್ಲಾಮಟ್ಟದಲ್ಲಿ ಪ್ರಥಮ, ಒಂದನೇ ತರಗತಿಯ ಮನ್ಹಾ ಬಾನು ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಶಾಲೆಗೆ ಹಾಗೂ ಹೆತ್ತವರಿಗೆ ಕೀರ್ತಿಯನ್ನು ತಂದಿರುತ್ತಾರೆ.

ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕವೃಂದ ಅಭಿನಂದಿಸಿದೆ.

Exit mobile version