Site icon Suddi Belthangady

ಉಜಿರೆಯಲ್ಲಿ ಸರಣಿ ಅಪಘಾತ

ಉಜಿರೆಯಲ್ಲಿ ಸರಣಿ ಅಪಘಾತ ಸಂಭವಿಸಿದ ಘಟನೆ ಜ.18 ರಂದು ಮಧ್ಯಾಹ್ನ ನಡೆದಿದೆ

ಉಜಿರೆ ಎಚ್.ಪಿ ಪೆಟ್ರೋಲ್ ಪಂಪು ಬಳಿ ಧರ್ಮಸ್ಥಳದಿಂದ ಮಂಗಳೂರಿಗೆ ಹಾದು ಹೋಗುವ ಸರಕಾರಿ ಬಸ್ಸಿಗೆ ಎದುರಿನಿಂದ ಬೈಕ್ ಅಡ್ಡ ಬಂದ ರಭಸಕ್ಕೆ ಬಸ್ ಚಾಲಕನು ನಿಯಂತ್ರಣಕ್ಕೆ ತಕ್ಷಣ ಬ್ರೇಕ್ ಹಾಕಿದ್ದು ಹಿಂಬದಿಯಿಂದ ಬರುತ್ತಿದ್ದ ಮಿನಿ ಬಸ್ ಡಿಕ್ಕಿ ಹೊಡೆದು ಅದರ ಹಿಂದೆ ಪಿಕಪ್ ವಾಹನವು ಡಿಕ್ಕಿ ಹೊಡೆದಿದೆ.ಎಲ್ಲಾ ವಾಹನಗಳಿಗೆ ನಿಯಂತ್ರಣ ತಪ್ಪಿದ ಘಟನೆ ನಡೆದಿದೆ.

ಸ್ಥಳದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿದ್ದು ಟ್ರಾಫಿಕ್ ಜಾಮ್ ಉಂಟಾಗಿದೆ.

Exit mobile version