ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಜಿರೆ ವಲಯದ ಒಕ್ಕೂಟದ ನೂತನ ಪದಾಧಿಕಾರಿಗಳ ತರಬೇತಿಯ ಉದ್ಘಾಟನೆಯನ್ನು ಜ.17ರಂದು ಜಿಲ್ಲೆಯ ನಿರ್ದೇಶಕ ಮಹಾಬಲ ಕುಲಾಲ್ ನೆರೆವೇರಿಸಿ ಗ್ರಾಮಾಭಿವೃದ್ಧಿ ಯೋಜನೆ ಹಿನ್ನಲೆ, ಧ್ಯೇಯೋದ್ದೇಶ, ಸಂಘದ ಗುಣಮಟ್ಟದ ಬಗ್ಗೆ ಮಾಹಿತಿ ನೀಡಿದರು.
ವಿಮಾ ಜಿಲ್ಲೆಯ ಸಮನ್ವಯಧಿಕಾರಿ ಹೇಮಲತಾ ರವರು ವಿಮಾ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ನಾಯಕತ್ವದ ಬಗ್ಗೆ ಕಾಮಿಡಿ ಕಿಲಾಡಿ ಆರ್ಟಿಸ್ಟ್ ಅನೀಶ್ ನಾಯಕನ ಗುಣ ನಡತೆ, ಸಂಘದ ಪದಾಧಿಕಾರಿಯವರ ಜವಾಬ್ದಾರಿ ಬಗ್ಗೆ ತಿಳಿಸಿದರು.
ತಾಲೂಕು ಯೋಜನಾಧಿಕಾರಿ ಸುರೇಂದ್ರ ಗುಣಮಟ್ಟದ ಸಾಲ ವಿತರಣೆ, ಯೋಜನೆಯ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.ತಾಲೂಕು ಜ್ಞಾನ ವಿಕಾಸ ಸಮನ್ವಯಧಿಕಾರಿ ಮಧುರ ವಸಂತ ಒಕ್ಕೂಟದ ನಿರ್ವಹಣೆ ಬಗ್ಗೆ ತಿಳಿಸಿದರು.
ಉದ್ಘಾಟನೆ ಸಂದರ್ಭದಲ್ಲಿ ವಲಯದ ಎಲ್ಲಾ ಒಕ್ಕೂಟದ ಅಧ್ಯಕ್ಷರು ಪದಾಧಿಕಾರಿಯವರು ಉಪಸಿತರಿದ್ದರು.ನೀರಚಿಲುಮೆ ಸೇವಾ ಪ್ರತಿನಿಧಿ ಸೌಮ್ಯ ಸ್ವಾಗತಿಸಿ, ಬೈಪಾಡಿ ಪ್ರಮೀಳಾ ಧನ್ಯವಾದ ನೀಡಿದರು.ವಲಯದ ಮೇಲ್ವಿಚಾರಕಿ ವನಿತಾ ಕಾರ್ಯಕ್ರಮ ನಿರೂಪಣೆ ಮಾಡಿದರು.