ಆನಾರು: ಪಟ್ರಮೆ ಗ್ರಾಮದ ಕಲ್ಲರಿಗೆ ನಿವಾಸಿ ಸಂತೋಷ್ ಗೌಡ (28ವ) ಯುವಕ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜ.16ರಂದು ವರದಿಯಾಗಿದೆ.
ಘಟನೆಯ ವಿವರ: ತರಕಾರಿಗೆ ಸಿಂಪಡಿಸಲು ತಂದಿದ್ದ ಕೀಟನಾಶಕ ಸೇವಿಸಿ ಅಸ್ವಸ್ಥರಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಮೃತರು ಉಜಿರೆಯ ಕೋಳಿ ಅಂಗಡಿಯಲ್ಲಿ ಕೆಲಸಕ್ಕೆ ಇದ್ದರು.ಆರ್ಥಿಕ ಸಮಸ್ಯೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.
ತಂದೆ ರಾಮಣ್ಣ ಗೌಡ, ತಾಯಿ ದೇಜಮ್ಮ, ಅಣ್ಣ ಸಂದೀಪ್ ಮತ್ತು ತಂಗಿ ಹಾಗೂ ಕುಟುಂಬ ವರ್ಗವನ್ನು ಅಗಲಿದ್ದಾರೆ.