Site icon Suddi Belthangady

ದಕ್ಷಿಣ ವಲಯ ಪುರುಷ ಮತ್ತು ಮಹಿಳಾ ವಿಭಾಗದ ನ್ಯಾಷನಲ್ ಚಾಂಪಿಯನ್ ಶಿಪ್‌ನಲ್ಲಿ ಎಸ್‌ಡಿಎಂ ವಿದ್ಯಾರ್ಥಿಗಳ ಸಾಧನೆ

ಉಜಿರೆ: ದಕ್ಷಿಣ ವಲಯ ಪುರುಷ ಮತ್ತು ಮಹಿಳಾ ವಿಭಾಗದ ನ್ಯಾಷನಲ್ ಚಾಂಪಿಯನ್ ಶಿಪ್ ತೆಲಂಗಾಣದ ಮೆಹಬೂಬ್ ನಗರದಲ್ಲಿ ಜ.11ರಿಂದ ಜ.16 ರವರೆಗೆ ನಡೆಯಿತು.ಎಸ್‌ಡಿಎಂ ಕಾಲೇಜಿನ ಎಂಟು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ದಕ್ಷಿಣ ವಲಯದ ಫಾಸ್ಟ್ 5 ಪುರುಷ ಚಾಂಪಿಯನ್ಶಿಪ್ ನಲ್ಲಿ ಕರ್ನಾಟಕ ತಂಡ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.ಎಸ್‌ಡಿಎಂ ಕಾಲೇಜಿನ ಪುನೀತ್, ಮೋಹನ್, ರಾಜ್, ಯಶವಂತ್ ತೇಲ್ಕರ್, ಪವನ್ ತಂಡದಲ್ಲಿ ಭಾಗವಹಿಸಿದ್ದರು.

ಸೌತ್ ದಕ್ಷಿಣ ವಲಯ ಫಸ್ಟ್ 5 ಮಹಿಳಾ ವಿಭಾಗದ ಕರ್ನಾಟಕ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.ಎಸ್‌ಡಿಎಂ ಕಾಲೇಜಿನ ಸಿಂಚನ.ಕೆ ಮತ್ತು ರಶ್ಮಿ ಎಸ್ ಭಾಗವಹಿಸಿದ್ದರು.

ಪುರುಷರ ಟ್ರೆಡಿಷನಲ್ ವಿಭಾಗದಲ್ಲಿ ಕರ್ನಾಟಕ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.ಈ ತಂಡದಲ್ಲಿ ಎಸ್‌ಡಿಎಂ ಕಾಲೇಜಿನ, ಇಬ್ಬರು ವಿದ್ಯಾರ್ಥಿಗಳಾದ ಸುಗನ್ ಎಂ.ಸಿ, ಪುನೀತ್ ಕುಮಾರ್ ವಿದ್ಯಾರ್ಥಿಗಳು ಭಾಗವಹಿಸಿ, ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಮಹಿಳಾ ಟ್ರೆಡಿಷನಲ್ ವಿಭಾಗದಲ್ಲಿ ಕರ್ನಾಟಕ ತಂಡ ಗೋಲ್ಡ್ ಮೆಡಲ್ ಪಡೆದುಕೊಂಡಿದೆ.ಈ ತಂಡದಲ್ಲಿ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿನಿ ಸುರಕ್ಷಾ ಇವರು ಭಾಗವಹಿಸಿದ್ದಾರೆ.

ಇವರಿಗೆ ಸುದೀನ್ ಹಾಗೂ ನಿತಿನ್ ತರಬೇತಿಯನ್ನು ನೀಡಿರುತ್ತಾರೆ.

Exit mobile version