Site icon Suddi Belthangady

ಸುಲ್ಕೇರಿಮೊಗ್ರು ಶ್ರೀ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

ಸುಲ್ಕೇರಿಮೊಗ್ರು ಶ್ರೀ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆಯು ಜ.14ರಂದು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನಡೆಯಿತು.

ಅಧ್ಯಕ್ಷರಾಗಿ ವೆಂಕಪ್ಪ ಬೈರೊಡ್ಚಿ, ಉಪಾಧ್ಯಕ್ಷರಾಗಿ ಜಗದೀಶ್ ಗೋಳಿತ್ಯಾರು, ಕಾರ್ಯದರ್ಶಿಯಾಗಿ ಅಶ್ವಥ್ ಕುಲಾಲ್, ಜೊತೆ ಕಾರ್ಯದರ್ಶಿಯಾಗಿ ಪುರುಷೋತ್ತಮ ಪಟ್ಲ ಹೊಸಮನೆ, ಕೋಶಾಧಿಕಾರಿಯಾಗಿ ಶಿವಪ್ಪ ಪೂಜಾರಿ ಕೊಲ್ಲಂಗೆ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಎಚ್.ಎಲ್.ರಾವ್ ಅನುವಂಶೀಯ ಆಡಳಿತ ಮೊಕ್ತೇಸರರು ಶ್ರೀ ಮಹಿಷಮರ್ದಿನಿ ದೇವಸ್ಥಾನ ಸುಲ್ಕೇರಿಮೊಗ್ರು, ಶ್ರೀ ಸೋಮನಾಥ ಬಂಗೇರ ವರ್ಪಾಳೆ, ಜಗನ್ನಾಥ ವರ್ಪಾಳೆ, ಹರಿ ಭಟ್ ಅರ್ಚಕರು, ಶ್ರೀ ರಾಜೇಂದ್ರ ಸಾಲಿಯಾನ್, ನಿಕಟ ಪೂರ್ವ ಅಧ್ಯಕ್ಷರು, ವ್ಯವಸ್ಥಾಪನ ಸಮಿತಿ ಶ್ರೀ ಮಹಿಷಮರ್ದಿನಿ ದೇವಸ್ಥಾನ, ಸಂಜೀವ ದೇವರಗುಡ್ಡೆ ನಿಕಟ ಪೂರ್ವ ಕಾರ್ಯದರ್ಶಿ ಹಾಗೂ ಊರವರು ಉಪಸ್ಥಿತರಿದ್ದರು.

Exit mobile version