Site icon Suddi Belthangady

ಶೈಕ್ಷಣಿಕ ಮತ್ತು ಆಡಳಿತಾತ್ಮಕ ಕಾರ್ಯಾಗಾರ

ಬೆಳ್ತಂಗಡಿ: ಕರ್ನಾಟಕ ರಾಜ್ಯ ಸರಕಾರಿ ಹಿರಿಯ ಹಾಗೂ ಪದವಿಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘ (ರಿ) ಬೆಂಗಳೂರು, ಬೆಳ್ತಂಗಡಿ ತಾಲೂಕು ಘಟಕದ ಆಶ್ರಯದಲ್ಲಿ ಸರಕಾರಿ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರಿಗೆ “ಶೈಕ್ಷಣಿಕ ಮತ್ತು ಆಡಳಿತಾತ್ಮಕ ಕಾರ್ಯಾಗಾರ ಜ.12ರಂದು ಬೆಳ್ತಂಗಡಿ ಸರಕಾರಿ ನೌಕರರ ಏಕತಾ ಭವನದಲ್ಲಿ ಜರಗಿತು.

ಕಾರ್ಯಾಗಾರವನ್ನು ಕ್ಷೇತ್ರಶಿಕ್ಷಣಾಧಿಕಾರಿಗಳಾದ ತಾರಾಕೇಸರಿಯವರು ಉದ್ಘಾಟಿಸಿದರು.ಅವರು ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡುತ್ತಾ ಶಿಕ್ಷಕರಿಗೆ ಇಲಾಖಾ ವತಿಯಿಂದ ಶೈಕ್ಷಣಿಕ ತರಬೇತಿಗಳನ್ನು ನೀಡಿರಬಹುದು ಆದರೆ ತಾಲೂಕಿನ ಮುಖ್ಯಶಿಕ್ಷಕರಿಗೆ ಆಡಳಿತಾತ್ಮಕ ಕಾರ್ಯಾಗಾರವನ್ನು ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರ ಸಂಘ ಏರ್ಪಡಿಸಿರುವುದು ಹೆಮ್ಮೆಯ ವಿಚಾರ.ಈ ಕಾರ್ಯಾಗಾರದ ಮೂಲಕ ಮುಖ್ಯ ಶಿಕ್ಷಕರ ಅರಿವಿನ ಕಣಜವನ್ನು ತುಂಬಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ ಮುಖ್ಯ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ಎಡ್ವರ್ಡ್ ಡಿ ಸೋಜ ಮುಖ್ಯಶಿಕ್ಷಕರು ಯಾವುದೇ ಒತ್ತಡಗಳಿಗೆ ಒಳಗಾಗದೆ ಸಮರ್ಥವಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿ ಆಡಳಿತ ವ್ಯಸ್ಥೆಯನ್ನು ಬಲಗೊಳಿಸೋಣ ಎನ್ನುತ್ತಾ ಸಂಘಟನೆಯನ್ನು ಬಲಪಡಿಸಲು ಎಲ್ಲರ ಸಹಕಾರ ಕೋರಿದರು.

ಮುಖ್ಯ ಅಭ್ಯಾಗತರಾಗಿ ಕ್ಷೇತ್ರ ಸಮನ್ವಯಾಧಿಕಾರಿ ಮೋಹನ್ ಕುಮಾರ್, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ನಿಂಗರಾಜು, ರಾಜ್ಯ ಸರಕಾರಿ ನೌಕರರ ತಾಲೂಕು ಅಧ್ಯಕ್ಷ ಜಯರಾಜ್ ಜೈನ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷ ಕಿಶೋರ್ ಕುಮಾರ್ ಮುಂತಾದವರು ಭಾಗವಹಿಸಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಮುಖ್ಯಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಮಹಾಲಿಂಗ ಕೆ, ತಾಲೂಕು ಘಟಕದ ಗೌರವಾಧ್ಯಕ್ಷ ಜಗನ್ನಾಥ ಎಂ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಶಿಕ್ಷಣ ಸಂಯೋಜಕಿ ಪುಷ್ಪಾ, ನಿವೃತ್ತ ಶಿಕ್ಷಕ ಲಕ್ಷ್ಮಣ ಪೂಜಾರಿ ಬದನಾಜೆ, ನಿವೃತ್ತ ಶಿಕ್ಷಕಿ ಮರಿಯಾ ಫೆರ್ನಾಂಡಿಸ್, ಸಂಪನ್ಮೂಲ ವ್ಯಕ್ತಿಗಳಾದ ಕೆಪಿಎಸ್ ಪೂಂಜಾಲಕಟ್ಟೆ ಇಲ್ಲಿಯ ಪ್ರಥಮ ದರ್ಜೆ ಸಹಾಯಕ ಪ್ರವೀಣ್ ಕುಮಾರ್, ಸರಕಾರಿ ಪ್ರೌಢಶಾಲೆ ಗೇರುಕಟ್ಟೆಯ ಪ್ರಥಮ ದರ್ಜೆ ಸಹಾಯಕ ಶಿವಶಂಕರ್ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ನಿವೃತ್ತಿಗೊಂಡ ಮುಖ್ಯಶಿಕ್ಷಕರುಗಳಾದ ಮೋನಪ್ಪ ಕೆಪಿಎಸ್ ಪುಂಜಾಲಕಟ್ಟೆ, ಪುಟ್ಟಣ್ಣ ನಾಯ್ಕ ನಾವೂರು, ಕೋಮಲಚಂದ್ರ ಚಾರ್ಮಾಡಿ, ವಿಶ್ವೇಶ್ವರ ಬುಳೇರಿ, ವಸಂತಿ ಕೆ ನಿಡ್ಲೆ, ಸುಮನಾಜಿ ಕುತ್ಲೂರು, ಶಾರದಾ ಬದನಾಜೆ, ವಸಂತಿ ಪೆರಿಂಜೆ, ಪದ್ಮಾವತಿ ಪೆರೋಡಿತ್ತಾಯಕಟ್ಟೆ ಇವರನ್ನು ಸನ್ಮಾನಿಸಲಾಯಿತು.

ಅಲ್ಲದೆ ಬೇರೆ ತಾಲೂಕು ಮತ್ತು ಜಿಲ್ಲೆಗಳಿಗೆ ವರ್ಗಾವಣೆಗೊಂಡ ಮುಖ್ಯಶಿಕ್ಷಕರುಗಳಾದ ಬಾಲಕೃಷ್ಣ ಎನ್, ಗುರುಮೂರ್ತಿ, ಮಹಾಂತೇಶ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ನಿವೃತ್ತರಾದ ನಾರಾಯಣ ನಾಯ್ಕ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಮುಖ್ಯ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಸ್ವಾಗತಿಸಿ ಜಿಲ್ಲಾ ಉಪಾಧ್ಯಕ್ಷ ಮಹಾಲಿಂಗ ಕೆ ಪ್ರಸ್ತಾವನೆಗೈದರು.ಕುವೆಟ್ಟು ಶಾಲಾ ಮುಖ್ಯಶಿಕ್ಷಕ ಭಾಸ್ಕರ್ ಮತ್ತು ಕೂಕ್ರಬೆಟ್ಟು ಶಾಲಾ ಮುಖ್ಯಶಿಕ್ಷಕಿ ಸುಫಲಾ ಕಾರ್ಯಕ್ರಮ ನಿರೂಪಿಸಿದರು.

ತಾಲೂಕು ಘಟಕದ ಪದಾಧಿಕಾರಿಗಳಾದ ಕೃಷ್ಟಪ್ಪ ಪೂಜಾರಿ, ಶಿವಸ್ವಾಮಿ, ಚಂದ್ರಾವತಿ, ಮಂಜುಳಾ ಜೆ ಟಿ., ಬಳಿರಾಮ ಮತ್ತು ಮಹಮ್ಮದ್ ಫಾರೂಕ್ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು.ಶಿಕ್ಷಣ ಸಂಯೋಜಕಿ ಪುಷ್ಪಾ ವಂದಿಸಿದರು.

ತಾಲೂಕಿನ ಎಲ್ಲ ಮುಖ್ಯೋಪಾಧ್ಯಾಯರ ತನು ಮನ ಧನದ ಸಹಕಾರದಿಂದ ಕಾರ್ಯಾಗಾರ ಯಶಸ್ವಿಯಾಯಿತು.

Exit mobile version