ಉಜಿರೆ: ಕರ್ನಾಟಕ ಗಮಕ ಕಲಾ ಪರಿಷತ್ ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ ಜ.20ರಂದು ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢ ಶಾಲೆಯಲ್ಲಿ ನಡೆಯಲಿರುವ 2ನೇ ತಾಲೂಕು ಗಮಕ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಸಮ್ಮೇಳನಾಧ್ಯಕ್ಷ ಧರ್ಮಸ್ಥಳದ ಹಿರಿಯ ಗಮಕಿಗಳಾದ ಜಯರಾಮ ಕುದ್ರೆತ್ತಾಯ ಅವರಿಗೆ ಅವರ ಮನೆಯಲ್ಲಿ ತಾಲೂಕು ಗಮಕ ಕಲಾ ಪರಿಷತ್ ಅಧ್ಯಕ್ಷ ರಾಮಕೃಷ್ಣ ಭಟ್ ಉಜಿರೆ ಮತ್ತು ಸಮ್ಮೇಳನದ ಸಂಯೋಜಕ ರಾಮಕೃಷ್ಣ ಭಟ್ ಬೆಳಾಲು ಅವರು ಗೌರವಪೂರ್ವಕವಾಗಿ ನೀಡಿ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿಕೊಡುವಂತೆ ವಿನಂತಿಸಿಕೊಂಡರು.
ಬೆಳ್ತಂಗಡಿ ತಾಲೂಕು ಗಮಕ ಸಮ್ಮೇಳನಾಧ್ಯಕ್ಷರಿಗೆ ಆಮಂತ್ರಣ ನೀಡಿಕೆ
