ಬೆಳ್ತಂಗಡಿ: ನಮ್ಮ ಇಂದಿನ ಈ ಬದುಕನ್ನು ನಮ್ಮ ಸಂವಿಧಾನ ಬದ್ದ ಹಕ್ಕುಗಳನ್ನು ನರೇಂದ್ರ ಮೋದಿ ಆಡಳಿತದ ದೆಸೆಯಿಂದ ಇಂದು ಬೇಡಿಕೆ ನೀಡಿ ಒತ್ತಾಯಿಸುವ ದುರ್ಗತಿಗೆ ಬಂದಿದೆ ಎಂದರೆ ನಮಗೆ ಅರ್ಥವಾಗುತ್ತದೆ ಎಂತಹ ಭಾರತವ ಇವರು ಸೃಷ್ಟಿಸುತ್ತಿದ್ದಾರೆ ಎಂದು ಸಿಐಟಿಯು ರಾಜ್ಯ ಸಮಿತಿ ಸದಸ್ಯರೂ ದ.ಕ. ಜಿಲ್ಲಾ ಉಪಾದ್ಯಕ್ಷ ಬಿ.ಎಂ.ಭಟ್ ಹೇಳಿದರು.
ಅವರು ಜ.12 ರಂದು ಬಸ್ ನಿಲ್ದಾಣದಲ್ಲಿ ಸಿಐಟಿಯು ನೇತೃತ್ವದಲ್ಲಿ ಸ್ವಾಮಿ ವಿವೇಕಾನಂದ ಸ್ವಾಮಿ ಅವರ ಜನ್ಮ ದಿನವಾದ ಪ್ರಯುಕ್ತ ಅವರ ಕನಸಿನ ಭಾರತವ ನಾಶ ಮಾಡುತ್ತಿರುವ, ನಿರುದ್ಯೋಗ, ಬೆಲೆ ಏರಿಕೆ ಮಾಡಿದ ಬಿಜೆಪಿ ಸರಕಾರದ ದುರಾಡಳಿತದ ವಿರುದ್ದ ಸಿಐಟಿಯು ನೇತೃತ್ವದಲ್ಲಿ ಸಹಿ ಸಂಗ್ರಹ ಆಂದೋಲನಕ್ಕೆ ಬೆಳ್ತಂಗಡಿಯಲ್ಲಿ ಚಾಲನೆ ಕೊಡುತ್ತಾ ಅವರು ಮಾತಾಡಿದರು.ಮೊದಲಿಗೆ ಸಿಐಟಿಯು ನಾಯಕಿ ಜಯಶ್ರೀ ಸ್ವಾಗತಿಸಿದರು.ಪುಷ್ಪಾ ವಂದಿಸಿದರು.
ಈ ಸಂದರ್ಭ ಸಿಐಟಿಯು ಮುಖಂಡರುಗಳಾದ ಜಯರಾಮ ಮಯ್ಯ, ಸಂಜೀವ ನಾಯ್ಕ, ರಾಮಚಂದ್ರ, ಉಷಾ, ಅಶ್ವಿತ, ಅಭಿಶೇಕ್, ಲೋಕಯ್ಯ ಪೂಜಾರಿ, ಸುಜಾತ, ಗಿರಿಜ ಮೇಲಂತಬೆಟ್ಟು, ಯಶೋದ ತಣ್ಣೀರುಪಂತ ಮೊದಲಾದವರಿದ್ದರು.
ಸಭೆಯಲ್ಲಿ ಸಹಿ ಮುಖ್ಯಮಂತ್ರಿಗಳ ಮೂಲಕ ಪ್ರಧಾನಿ ನರೇಂದ್ರ ಮೋದಿಗೆ ನೀಡಲಿರುವ ಜನಸಾಮಾನ್ಯರ, ಸಂಘಟಿತ, ಅಸಂಘಟಿತ ಕಾರ್ಮಿಕರ, ಸ್ಕೀಂ ನೌಕರರ ಬೇಡಿಕೆಗಳ ಮನವಿ ಫಾರಂಗೆ ಸಹಿ ಸಂಗ್ರಹ ಆಂದೋಲನ ಪ್ರಾರಂಬಿಸಲಾಯಿತು.