Site icon Suddi Belthangady

ಎಲ್.ಸಿ.ಆರ್ ಇಂಡಿಯನ್ ಪದವಿಪೂರ್ವ ವಿಭಾಗದ ವಿದ್ಯಾರ್ಥಿಗಳಿಂದ ಕೈಗಾರಿಕಾ ಭೇಟಿ

ಕಕ್ಕೆಪದವು: ಜ.10ರಂದು ವಿದ್ಯಾರ್ಥಿಗಳಿಗೆ ಸೈದ್ಧಾಂತಿಕ ಜ್ಞಾನದ ಜೊತೆಗೆ ಕೈಗಾರಿಕಾ ಕಾರ್ಯಗಳ ಅರಿವು ಮತ್ತು ಆಂತರಿಕ ಕೆಲಸದ ವಾತಾವರಣ ಪರಿಚಯಿಸುವ ನಿಟ್ಟಿನಲ್ಲಿ ಎಲ್.ಸಿ.ಆರ್ ಇಂಡಿಯನ್ ಪದವಿಪೂರ್ವ ಕಾಲೇಜು ಕಕ್ಯಪದವು ಇಲ್ಲಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಂದ ಗುರುಚರಣ್ ಪ್ಲಾಸ್ಟಿಕ್ ಪ್ರಕ್ರಿಯಾ ಯಂತ್ರೋಪಕರಣಗಳ ತಯಾರಿಕಾ ಕಾರ್ಖಾನೆ ಹಾಗೂ ಪ್ರ್ಯಾಗ್ ಇಂಡಿಯಾ ಸುಗಂಧ ದ್ರವ್ಯಗಳ ತಯಾರಿಕಾ ಕಾರ್ಖಾನೆ ಬೈಕಂಪಾಡಿ ಇಲ್ಲಿಗೆ ಭೇಟಿ ನೀಡಲಾಯಿತು.

ಕಾರ್ಖಾನೆಗಳ ವಿವಿಧ ಭಾಗಗಳನ್ನು ಸಂದರ್ಶಿಸಿ ಕೆಲಸದ ಬಗ್ಗೆ ನೈಜ ಚಿತ್ರಣ ಪಡೆದು ಸಂಸ್ಥೆಯ ಮೇಲ್ವಿಚಾರಕರಾದ ವೇಣು ಕದ್ರಿ ಅವರಿಂದ ಉಪಯುಕ್ತ ಮಾಹಿತಿಯನ್ನು ಪಡೆಯಲಾಯಿತು.

ಯಂತ್ರೋಪಕರಣಗಳ ಉತ್ಪಾದನಾ ಪ್ರಕ್ರಿಯೆ, ಬಿಡಿಭಾಗಗಳ ತಯಾರಿಕೆ, ವೆಚ್ಚ, ಆದಾಯ ಹಾಗೂ ವಿವಿಧ ಯಂತ್ರೋಪಕರಣಗಳು, ಉತ್ಪಾದನೆಯನ್ನು ಮಾಡುವ ವಿಧಾನ ಮೊದಲಾದವುಗಳ ಸಂಪೂರ್ಣ ಮಾಹಿತಿಯನ್ನು ತಿಳಿಯಲಾಯಿತು.

ನಮ್ಮ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ‌ಜೋಸ್ಟನ್ ಲೋಬೊ ಅವರು ಕೈಗಾರಿಕಾ ಭೇಟಿಯೊಂದಿಗೆ ಜೊತೆಗಿದ್ದು ಉಪಯುಕ್ತ ಸಲಹೆ ಸೂಚನೆಗಳನ್ನು ನೀಡಿ ಕೈಗಾರಿಕಾ ಭೇಟಿಯನ್ನು ಯಶಸ್ವಿಗೊಳಿಸಿದರು.

ಕಾಲೇಜು ವಿಭಾಗದ ಮುಖ್ಯಸ್ಥೆ ಸೌಮ್ಯ.ಎನ್ ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ದೀಕ್ಷಿತಾ ಹಾಗೂ ವಿಭಾಗದ ಉಪನ್ಯಾಸಕರು ಜೊತೆಗಿದ್ದು ಸಹಕರಿಸಿದರು.

Exit mobile version