Site icon Suddi Belthangady

ಉಜಿರೆ ಅನುಗ್ರಹ ಶಾಲಾ ವಿದ್ಯಾರ್ಥಿಗಳು ಕರಾಟೆಯಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

ಉಜಿರೆ: ಹಾಸನ ಡಿಸ್ಟ್ರಿಕ್ಟ್ ಕರಾಟೆ ಅಸೋಸಿಯೇಷನ್, ಮೌಲ್ ಶೂಟೋಕಾನ್ ಕರಾಟೆ ಡೊ ಅಸೋಸಿಯೇಷನ್ ಇಂಡಿಯಾ ಮತ್ತು ಕರ್ನಾಟಕ ರಾಜ್ಯ ಕರಾಟೆ ಅಸೋಸಿಯೇಷನ್ ಸಹಯೋಗದಲ್ಲಿ ಹಾಸನದ ಹಾಸನಾಂಬಾ ಇನ್‌ಡೋರ್ ಸ್ಟೇಡಿಯಂನಲ್ಲಿ ಜ.7 ರಂದು ನಡೆದ ಹಾಸನ್ ಓಪನ್ 3ನೇ ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿ-2024ರಲ್ಲಿ ವೈಯಕ್ತಿಕ ಫೈಟಿಂಗ್ ಮತ್ತು ಕಟಾ ವಿಭಾಗದಲ್ಲಿ ಉಜಿರೆಯ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ 5ನೇ ತರಗತಿಯ ಮಹಮ್ಮದ್ ರಯ್ಯಾನ್ ಮತ್ತು ಮಹಮ್ಮದ್ ಫಾಝಿಮ್ ಹಾಗೂ 4ನೇ ತರಗತಿಯ ನಿಶಾನ್ ಹೆಚ್.ಪೂಜಾರಿ ಯವರು ಪ್ರಥಮ ಸ್ಥಾನ ಹಾಗೂ ಚಿನ್ನದ ಪದಕ ಪಡೆದು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಅನುಗ್ರಹ ಶಾಲೆಗೆ ಕೀರ್ತಿ ತಂದುಕೊಟ್ಟ ಇವರ ಸಾಧನೆಗೆ ಶಾಲಾ ಸಂಚಾಲಕರಾದ ಫಾ! ಜೇಮ್ಸ್ ಡಿಸೋಜ ಮತ್ತು ಪ್ರಾಂಶುಪಾಲರಾದ ಫಾ! ವಿಜಯ್ ಲೋಬೊ ಅಭಿನಂದಿಸಿದ್ದಾರೆ.

Exit mobile version