Site icon Suddi Belthangady

ಪುಂಜಾಲಕಟ್ಟೆ ಬುರೂಜ್ ಶಾಲೆಗೆ ನವೋದಯ ಕನ್ನಡ ಪರೀಕ್ಷೆಯಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ

ಪುಂಜಾಲಕಟ್ಟೆ: ಬುರೂಜ್ ಆಂಗ್ಲ ಮಾಧ್ಯಮ ಫ್ರೌಡಶಾಲೆ ರಝಾನಗರ ಇಲ್ಲಿಯ ವಿದ್ಯಾರ್ಥಿಗಳು ಚಿಂತನಾ ಪ್ರಕಾಶನ ಚಿತ್ರದುರ್ಗದವರು ಸಂಘಟಿಸಿರುವ ರಾಜ್ಯ ಮಟ್ಟದ ನವೋದಯ ಕನ್ನಡ ಸ್ಪರ್ಧಾ ಪರೀಕ್ಷೆಯಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಪಡೆದಿರುತ್ತಾರೆ.

ಬುರೂಜ್ ಶಾಲೆ “ಉತ್ತಮ ರಾಜ್ಯ ಶಾಲೆ” ಎಂಬ ಮನ್ನಣೆಗೆ ಪಾತ್ರವಾಗಿದೆ.

ನಾಲ್ಕನೇ ತರಗತಿಯ ಕವನ್ ಕುಮಾರ್ ರಾಜ್ಯ ಮಟ್ಟದಲ್ಲಿ ಪ್ರಥಮ, ಏಳನೇ ತರಗತಿಯ ಸನಾ ಶೆಟ್ಟಿ ಮತ್ತು ಅಫ್ರೀನಾ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಶಾಲೆಗೆ ಹಾಗೂ ಹೆತ್ತವರಿಗೆ ಕೀರ್ತಿಯನ್ನು ತಂದಿರುತ್ತಾರೆ.ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕವೃಂದ ಅಭಿನಂದಿಸಿದೆ.

Exit mobile version