ಪಟ್ರಮೆ: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಅನಾರು-ಪಟ್ರಮೆ ಯಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವವು ಜ.14ನೇ ರವಿವಾರ ಮಕರ ಸಂಕ್ರಮಣದಿಂದ ಜ.18 ನೇ ಗುರುವಾರದವರೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪರಮಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಮತ್ತು ಬ್ರಹ್ಮಶ್ರೀ ಉಚ್ಚಿಲ ಪದ್ಮನಾಭ ತಂತ್ರಿಗಳು ನೀಲೇಶ್ವರ ಇವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಜ.14 ರಂದು ಸಂಜೆ ನಡೆಯುವ ಧಾರ್ಮಿಕ ಸಭೆಯ ಅಧ್ಯಕ್ಷರಾಗಿ ನಿತೇಶ್ ಬಲ್ಲಾಳ್ ಉಳಿಯಬೀಡು, ಮುಖ್ಯ ಅತಿಥಿಗಳಾಗಿ ಶಶಿಧರ ಶೆಟ್ಟಿ ಉದ್ಯಮಿಗಳು ಬರೋಡ ಮತ್ತು ಪಟ್ರಮೆ ಗ್ರಾ.ಪಂ ಅಧ್ಯಕ್ಷ ಮನೋಜ್ ಭಾಗವಹಿಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮಗಳು: ಜ.14 ರಂದು ರಾತ್ರಿ 9.00ರಿಂದ: ಸ.ಉ.ಹಿ.ಪ್ರಾ.ಶಾಲೆ ಅನಾರು ಪಟ್ರಮೆ ಮತ್ತು ಸ.ಹಿ.ಪ್ರಾ.ಶಾಲೆ ಸುರ್ಯತ್ತಾವು ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು
ಜ.15ರಂದು ರಾತ್ರಿ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಸಂಘ, ಅನಾರು ಪಟ್ರಮೆ ಯಕ್ಷಗಾನ ಪ್ರದರ್ಶನ “ಭಕ್ತಮಯೂರ ಧ್ವಜ”, ಜ.16 ರಂದು ರಾತ್ರಿ: ಶ್ರೀ ದುರ್ಗಾಪರಮೇಶ್ವರೀ ಮಕ್ಕಳ ಯಕ್ಷಗಾನ ಸಂಘ, ಅನಾರು ಪಟ್ರಮೆ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.