Site icon Suddi Belthangady

ಪುಂಜಾಲಕಟ್ಟೆ ಬುರೂಜ್ ಶಾಲೆಯಲ್ಲಿ ಟ್ಯಾಲೆಂಟ್ ಫೆಸ್ಟ್ 2023

ಪುಂಜಾಲಕಟ್ಟೆ: ಬುರೂಜ್ ಆಂಗ್ಲ ಮಾಧ್ಯಮ ಫ್ರೌಡಶಾಲೆ ರಝಾನಗರದಲ್ಲಿ ಟ್ಯಾಲೆಂಟ್ ಫೆಸ್ಟ್ 2023 ಇತ್ತೀಚೆಗೆ ನಡೆಯಿತು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಉಮಾಮಹೇಶ್ವರ್ ಸಹಪರಿವಾರ ದೇವಸ್ಥಾನ ಕಜೆಕೋಡಿ ಇಲ್ಲಿಯ ಅಧ್ಯಕ್ಷ ಚಂದ್ರಶೇಖರ್ ಭಟ್ ಮತ್ತು ಇತರ ಗಣ್ಯರು ಗಿಡಕ್ಕೆ ನೀರು ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮಾಜಿ ಸಚಿವರಾದ ಬಿ.ರಮಾನಾಥ ರೈ ಮೆಡಲ್ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಕಾರ್ಯಕ್ರಮದ ಉದ್ದೇಶಿಸಿ ಮಾತನಾಡಿದರು.

ರಾಜ್ಯೋತ್ಸವ ಪ್ರಶಸ್ತಿ ಪಡೆದ ಮೀಫ್ ಸಂಸ್ಥೆಯ ಅಧ್ಯಕ್ಷ ಮೂಸಬ್ಬ ಬ್ಯಾರಿ ಇವರಿಗೆ ಶಾಲಾ ಪರವಾಗಿ ಸನ್ಮಾನಿಸಲಾಯಿತು.ಇವರು ಮಾತನಾಡಿ ಸಂಸ್ಥೆಯ ಸಂಸ್ಥಾಪಕರನ್ನು ಕೊಂಡಾಡಿದರು.ಮೀಫ್ ನ ಪ್ರೋಗ್ರಾಂ ಸೆಕ್ರೆಟರಿ ಮೊಹಮ್ಮದ್ ಶಾರಿಕ್ ನೊಬೆಲ್ ಕುಂಜತ್ತೋಡಿ ಮಾತಾಡಿ ಬುರೂಜ್ ಸಂಸ್ಥೆಯ ಶಿಕ್ಷಕರ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ, ಸಂಸ್ಥಾಪಕರನ್ನು “ಬಂಟ್ವಾಳದ ಹಾಜಬ್ಬ”, “ಶಿಕ್ಷಣ ಸಂತ” ಎಂದು ಹೊಗಳಿದರು.

ಡಾಕ್ಟರ್ ಆಗಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆಯಲ್ಲಿ ಕಲಿತ ಇಬ್ಬರು ವಿದ್ಯಾರ್ಥಿಗಳಾದ ಡಾ.ಪ್ರಫುಲ್ಲ ಎಂ.ಯು ಮತ್ತು ಡಾ.ದಿಲ್ ಶಾದ್ ಹಾಗೂ 2023 ರಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಟಾಪರ್ ಆಗಿ ಹೊರ ಹೊಮ್ಮಿದ ಅಮೀನತ್ ಝಕೀಯ್ಯರವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು ಪದ್ಮಶೇಖರ ಜೈನ್, ಇರ್ವತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ ಎಸ್.ಪೂಜಾರಿ, ರಾಷ್ಟ್ರೀಯ ಬೆಸ್ಟ್ ಟೀಚರ್ ವಿಜೇತ ರಮೇಶ್ ನಾಯಕ್ ರಾಯಿ, ಮೀಫ್ ಉಪಾಧ್ಯಕ್ಷ ಹಾಗೂ ಜಮೀಯ್ಯತ್ತುಲ್ ಫಲಾಹ್ ಮಾಜಿ ಅಧ್ಯಕ್ಷ ಶಬೀ ಅಹ್ಮದ್ ಖಾಝಿ ಕಾಪು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಸುದ್ದಿ ಬಿಡುಗಡೆ ಪುತ್ತೂರು ವಿಭಾಗದ ಪತ್ರಕರ್ತ ವಸಂತ ಕುಮಾರ್, ಅಮ್ಮುರೈ ಸರ್ಕಾರಿ, ಭಾರತ್-ಸ್ಕೌಟ್ಸ್ ಮತ್ತು ಗೈಡ್ಸ್ ವಾಮದಪದವು ಇದರ ಅಧ್ಯಕ್ಷ ಆನಂದ ಆಚಾರ್ಯ, ಪ್ರಖ್ಯಾತಿ ಸಾಮಾಜಿಕ ಕಾರ್ಯಕರ್ತ ಮತ್ತು ಉತ್ತಮ ಕೃಷಿಕ ಜೈ ಚಂದ್ರ ಬೋಲ್ಮಾರ್, ಚೆನ್ನೈತ್ತೋಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ನವೀನ್ ಚಂದ್ರ ಶೆಟ್ಟಿ, ಚೆನ್ನೈತ್ತೋಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಯತೀಶ್ ಶೆಟ್ಟಿ, ಮಸ್ಜಿದ್ ಅಲ್ ಬದ್ರಿಯಾ ಅಧ್ಯಕ್ಷ ಹಂಝ ಬಸ್ತಿ ಕೊಡಿ, ಮಸ್ಜಿದ್ ಇ ಕಮರುಲ್ ಇಸ್ಲಾಂ ರಝಾನಗರ ಇದರ ಅಧ್ಯಕ್ಷ ನೂರುಲ್ಲಾ ಅಬ್ದುಲ್ ರೆಹಮಾನ್ ಕಲಾ ಬಾಗಿಲು, ಸಿವಿಲ್ ಕಾಂಟ್ರಾಕ್ಟರ್ ಬಂಟ್ವಾಳದ ಮೋಹನ್ ಶೆಟ್ಟಿ ನರವಲ್ದಡ್ಡ, ಕಾಂತಾರ ಚಲನಚಿತ್ರದ ಅಸಿಸ್ಟೆಂಟ್ ಡೈರೆಕ್ಟರ್ ಚಲನಚಿತ್ರ ನಟ ಕಾಸರಗೋಡಿನ ರಂಜನ್( ದಡ್ಡ ಪ್ರವೀಣ), ಆಶಿಕ್ ಕುಕ್ಕಾಜೆ, ಪೋಷಕ ರಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ಅಝೀಝ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸೈಯದ್ ಯೂಸೂಫ್, ವಿದ್ಯಾರ್ಥಿ ಸಂಘದ ನಾಯಕ ಮಹಮ್ಮದ್ ನಯೀಮ್, ಉಪನಾಯಕ ಅನ್ವಿತ್, ಮುಖ್ಯ ಶಿಕ್ಷಕಿ ಜಯಶ್ರೀ ಸಾಲ್ಯಾನ್ ಮತ್ತು ವಿಮಲಾ ಉಪಸ್ಥಿತರಿದ್ದರು.

ಶಾಲಾ ಮಕ್ಕಳಿಗೆ ಅತಿಥಿ ಗಣ್ಯರು ಬಹುಮಾನ ವಿತರಿಸಿದರು.ಕಾರ್ಯಕ್ರಮದ ಅಧ್ಯಕ್ಷರು ಮತ್ತು ಸಂಸ್ಥೆಯ ಸಂಸ್ಥಾಪಕ ಶೇಖ್ ರಹ್ಮತ್ತುಲ್ಲಾ ಸರ್ವರನ್ನು ಸ್ವಾಗತಿಸಿದರು.ವರದಿ ವಾಚನವನ್ನು ಮುಖ್ಯ ಶಿಕ್ಷಕಿ ಓದಿದರು.ರಝೀಯಾ ಎಸ್.ಪಿ ಸರ್ವರನ್ನು ವಂದಿಸಿದರು.ಶೋಭಾ, ಪವಿತ್ರ, ರೂಹಿ ಕಾರ್ಯಕ್ರಮ ನಿರೂಪಿಸಿದರು.

ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಮಿಮಿಕ್ರಿ, ನಾಟಕ ಪ್ರದರ್ಶನ ನಡೆಯಿತು.

Exit mobile version