Site icon Suddi Belthangady

ಮುಕ್ತ ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್- ಸೆನ್ಸಾಯಿ ಮೋಹನ್ ಬಜೆ ರವರಿಗೆ ಕುಮಿತೆ, ಕತದಲ್ಲಿ ಬೆಳ್ಳಿ ಪದಕ

ಉಜಿರೆ: ಹಾಸನದಲ್ಲಿ ನಡೆದಂತಹ ಮುಕ್ತ ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಉಜಿರೆ ಶೋರೀನ್ ರಿಯೊ ಕರಾಟೆ ಅಶೋಷಿಯೇಶ್ ನ ವಿದ್ಯಾರ್ಥಿ ಸೆನ್ಸಾಯಿ ಮೋಹನ್ ಬಜೆ ಇವರು ಸೀನಿಯರ್ ಬ್ಲಾಕ್ ಬೆಲ್ಟ್ ವಿಭಾಗದ ಕುಮಿತೆ ಮತ್ತು ಕತದಲ್ಲಿ ಬೆಳ್ಳಿ ಪದಕವನ್ನು ಪಡೆದುಕೊಂಡಿರುತ್ತಾರೆ.

ಇವರು ಕೊಯ್ಯೂರಿನ ಬಜ ಸೇಸಪ್ಪ ಪೂಜಾರಿ ಮತ್ತು ಬೇಬಿ ಅವರ ಪುತ್ರರಾಗಿದ್ದು, ಇವರು ಮೂಡಬಿದ್ರೆಯ ರೆನ್ಸಿ ನದೀಮ್ ಮತ್ತು ಉಜಿರೆಯ ಶಿಹಾನ್ ಅಬ್ದುಲ್ ರಹಿಮಾನ್ ಇವರಿಂದ ತರಬೇತಿಯನ್ನು ಪಡೆದಿದ್ದು, ತಾಲೂಕಿನ ಹಲವು ಶಾಲೆಗಳಲ್ಲಿ ತರಬೇತಿಯನ್ನು ನೀಡುತ್ತಿದ್ದಾರೆ.

Exit mobile version