Site icon Suddi Belthangady

ಉಜಿರೆಯ ಮಹಮ್ಮದ್ ಫಾಝಿಮ್ ಕರಾಟೆಯಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

ಉಜಿರೆ: ಹಾಸನ ಡಿಸ್ಟ್ರಿಕ್ಟ್ ಕರಾಟೆ ಅಸೋಸಿಯೇಷನ್, ಮೌಲ್ ಶೂಟೋಕಾನ್ ಕರಾಟೆ ಡೊ ಅಸೋಸಿಯೇಷನ್ ಇಂಡಿಯಾ ಮತ್ತು ಕರ್ನಾಟಕ ರಾಜ್ಯ ಕರಾಟೆ ಅಸೋಸಿಯೇಷನ್ ಸಹಯೋಗದಲ್ಲಿ ಹಾಸನದ ಹಾಸನಾಂಬಾ ಇನ್ ಡೋರ್ ಸ್ಟೇಡಿಯಂನಲ್ಲಿ ಜ.7ರಂದು ನಡೆದ ಹಾಸನ್ ಓಪನ್ 3ನೇ ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿ-2024ರಲ್ಲಿ ಕಟಾ ವಿಭಾಗದಲ್ಲಿ ಪ್ರಥಮ ಮತ್ತು ವೈಯಕ್ತಿಕ ಫೈಟಿಂಗ್ ವಿಭಾಗದಲ್ಲಿ ಉಜಿರೆಯ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ 5ನೇ ತರಗತಿಯ ಮಹಮ್ಮದ್ ಫಾಝಿಮ್ ಅವರು ತೃತೀಯ ಸ್ಥಾನ, ಚಿನ್ನದ ಪದಕ ಮತ್ತು ಟ್ರೋಫಿ ಪಡೆದು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಮಹಮ್ಮದ್ ಫಾಝಿನ್ ಇವರು ಮೈಕೆ ನಿವಾಸಿ ಉಮಾರ್ ಫಾರುಕ್ ಮತ್ತು ಝೀನತ್ ದಂಪತಿಯ ಪುತ್ರ.ಮಹಮ್ಮದ್ ಫಾಝಿಮ್ ಅವರು ಸೆನ್ಸಾಯ್ ಸಿಹಾನ್ ಅಬ್ದುಲ್ ರಹಮಾನ್ ಅವರಿಂದ ತರಬೇತಿ ಪಡೆದು ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

Exit mobile version