Site icon Suddi Belthangady

ಉಜಿರೆಯ ಮಹಮ್ಮದ್ ರಯ್ಯಾನ್ ಕರಾಟೆಯಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

ಉಜಿರೆ: ಹಾಸನ ಡಿಸ್ಟ್ರಿಕ್ಟ್ ಕರಾಟೆ ಅಸೋಸಿಯೇಷನ್, ಮೌಲ್ ಶೂಟೋಕಾನ್ ಕರಾಟೆ ಡೊ ಅಸೋಸಿಯೇಷನ್ ಇಂಡಿಯಾ ಮತ್ತು ಕರ್ನಾಟಕ ರಾಜ್ಯ ಕರಾಟೆ ಅಸೋಸಿಯೇಷನ್ ಸಹಯೋಗದಲ್ಲಿ ಹಾಸನದ ಹಾಸನಾಂಬಾ ಇನ್ ಡೋರ್ ಸ್ಟೇಡಿಯಂನಲ್ಲಿ ಜ.7ರಂದು ನಡೆದ ಹಾಸನ್ ಓಪನ್ 3ನೇ ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿ-2024ರಲ್ಲಿ ವೈಯಕ್ತಿಕ ಫೈಟಿಂಗ್ ಮತ್ತು ಕಟಾ ವಿಭಾಗದಲ್ಲಿ ಉಜಿರೆಯ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ 5ನೇ ತರಗತಿಯ ಮಹಮ್ಮದ್ ರಯ್ಯಾನ್ ಅವರು ಪ್ರಥಮ ಸ್ಥಾನ ಮತ್ತು 2 ಚಿನ್ನದ ಪದಕ ಪಡೆದು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಮಹಮ್ಮದ್ ರಯ್ಯಾನ್ ಅವರು ಉಜಿರೆಯ ಗಾಂಧಿನಗರ ನಿವಾಸಿ ಬಿ.ಎಚ್.ಇಬ್ರಾಹಿಂ ಮತ್ತು ನೂರ್ ಜಹಾನ್ ದಂಪತಿ ಪುತ್ರ ಮತ್ತು ಸೆನ್ಸಾಯ್ ಸಿಹಾನ್ ಅಬ್ದುಲ್ ರಹಮಾನ್ ಅವರಿಂದ ತರಬೇತಿ ಪಡೆದಿದ್ದರು.ಅವರು ಶೋರಿನ್ ರಿಯೋ ಕರಾಟೆ ಅಸೋಸಿಯೇಷನ್ ಆಶ್ರಯದಲ್ಲಿ ಮೂಡಬಿದ್ರಿಯಲ್ಲಿ ನಡೆದ ರಾಜ್ಯ ಮಟ್ಟದ 20ನೇ ಮುಕ್ತ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದರು.

ಹಾಸನದ ಶಾಸಕ ಸ್ವರೂಪ ಪ್ರಕಾಶ್, ಕರ್ನಾಟಕ ರಾಜ್ಯ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಕ್ಯೋಶಿ ಎಂ. ಅಲ್ತಾಫ್ ಪಾಷಾ, ಕರಾಟೆ ಅಸೋಸಿಯೇಷನ್ ಜನರಲ್ ಸೆಕ್ರೆಟರಿ, ಪಂದ್ಯಾವಳಿ ನಿರ್ದೇಶಕ ರೆನ್ಷಿ ಶಿವಮೊಗ್ಗ ವಿನೋದ್ ಮತ್ತು ಹಾಸನ ಜಿಲ್ಲಾ ಕರಾಟೆ ಅಸೋಸಿಯೇಷನ್ ಅಧ್ಯಕ್ಷ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೆನ್ಸಾಯಿ ಮಹಮ್ಮದ್ ಆರಿಫ್ ಪ್ರಶಸ್ಥಿ ಪತ್ರ ಮತ್ತು ಚಿನ್ನದ ಪದಕ ತೊಡಿಸಿ ಅಭಿನಂದಿಸಿ ಗೌರವಿಸಿದರು.

Exit mobile version