Site icon Suddi Belthangady

ಕನ್ಯಾಡಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಗೆ ಅಯೋಧ್ಯೆ ಮಂತ್ರಾಕ್ಷತೆ ವಿತರಣೆ

ಕನ್ಯಾಡಿ: ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿಯಲ್ಲಿ ಪ್ರಭು ಶ್ರೀರಾಮಚಂದ್ರನ ಪ್ರಾಣಪ್ರತಿಷ್ಠಾ ಕಾರ್ಯಕ್ರಮದ ಪವಿತ್ರ ಅಕ್ಷತೆಯನ್ನು ಕನ್ಯಾಡಿ ಶ್ರೀರಾಮ ಕ್ಷೇತ್ರದ ಪೀಠಾಧೀಶರಾದ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಗೆ ನೀಡಿದರು.

ಈ ಸಂದರ್ಭದಲ್ಲಿ ಹಿರಿಯರಾದ ಮನೋಹರ್ ರಾವ್ ಯು.ಬಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸುದರ್ಶನ್ ಕನ್ಯಾಡಿ, ಅಭಿಯಾನದ ಪ್ರಮುಖರಾದ ಪ್ರೀತಮ್ ಧರ್ಮಸ್ಥಳ, ಭರತ್ ರಾವ್ ವೈಷ್ಣವಿ, ಪ್ರಭಾಕರ್ ಬೊಳ್ಮಾ, ನೀಲಕಂಠ ಶೆಟ್ಟಿ, ಧನಲಕ್ಷ್ಮೀ ಜನಾರ್ಧನ್, ನವೀನ್ ಸುವರ್ಣ, ಯತೀಶ್ ಸುವರ್ಣ, ಮನೀಶ್, ಅರುಣ್ ರಾವ್, ಶ್ರೇಯಸ್ ರಾವ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಪ್ರತಿಷ್ಠಾ ದಿನವಾದ ಜನವರಿ 22ರಂದು ಕನ್ಯಾಡಿ ಶ್ರೀರಾಮ ಕ್ಷೇತ್ರದಲ್ಲಿ ಬೆಳಿಗ್ಗೆ ಗಂಟೆ 9-30ರಿಂದ ಶ್ರೀ ರಾಮ ತಾರಕ ಜಪಯಜ್ಞ, ಅಯೋಧ್ಯೆಯ ಪ್ರಾಣ ಪ್ರತಿಷ್ಠೆಯ ನೇರಪ್ರಸಾರ ಹಾಗೂ ಕ್ಷೇತ್ರದಲ್ಲಿ ವಿಶೇಷ ಪೂಜೆ ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

Exit mobile version