ಬೆಳ್ತಂಗಡಿ: ಭಾರತೀಯ ಭೂ ಸೇನೆಯಲ್ಲಿ ಸುಧೀರ್ಘ 28 ವರ್ಷಗಳ ಸೇವೆ ಸಲ್ಲಿಸಿ ಡಿ.31 ರಂದು ನಿವೃತ್ತರಾದ ಸುಬೇದಾರ್ ಮೇಜರ್ ಶಿವಕುಮಾರ್ ಊರಿಗೆ ಆಗಮಿಸಿದ ಸಂದರ್ಭ ಜ.6 ರಂದು ಮೆರವಣಿಗೆ ಮೂಲಕ ಸ್ವಾಗತ ಮಾಡಲಾಯಿತು.
ಬಳಿಕ ಬಸ್ ನಿಲ್ದಾಣದಲ್ಲಿ ನಡೆದ ಸಭೆಯಲ್ಲಿ ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್, ಮಾಜಿ ಸೈನಿಕರ ಸಂಘದ ಮಾಜಿ ಅಧ್ಯಕ್ಷ ಸುನೀಲ್ ಶೆಣೈ, ಅಧ್ಯಕ್ಷ ಮಹಮ್ಮದ್ ರಫೀಕ್, ಶಿವಕುಮಾರ್ ರವರ ತಾಯಿ ಸುಂದರಿ, ಸಹೋದರ ಹರೀಶ್, ಊರವರು ಹಾಜರಿದ್ದರು.