Site icon Suddi Belthangady

ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಲ್ಲಿ ಮುಗೇರಡ್ಕ ನೇತ್ರಾವತಿ ನದಿಯಲ್ಲಿ ಉತ್ತಮ ತಳಿಯ ಮೀನು ಮರಿಗಳ ಬಿತ್ತನೆ ಮಾಡಿದ ಶಾಸಕ ಹರೀಶ್ ಪೂಂಜ

ಮೊಗ್ರು: ಜ.06 ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಬೆಳ್ತಂಗಡಿ ತಾಲೂಕಿನ, ಬಂದಾರು ಗ್ರಾಮ ಪಂಚಾಯತ್ ವ್ಯಾಪ್ತಿಯ, ಮೊಗ್ರು ಗ್ರಾಮದ ಮುಗೇರಡ್ಕ ಮೂವರು ದೈವಗಳ ದೈವಸ್ಥಾನದ ಮುಂಭಾಗದ ನೇತ್ರಾವತಿ ನದಿಯಲ್ಲಿ ಉತ್ತಮ ತಳಿಯ ಸುಮಾರು 2ಲಕ್ಷ ಮೀನುಮರಿಗಳ ಬಿತ್ತನೆ ಕಾರ್ಯಕ್ರಮವನ್ನು ಶಾಸಕ ಹರೀಶ್ ಪೂಂಜ ರವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್, ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ ಖಂಡಿಗ, ಉಪಾಧ್ಯಕ್ಷೆ ಪುಷ್ಪಾವತಿ ಬಂದಾರು, ಮಂಗಳೂರು ಮೀನುಗಾರಿಕೆ ಜಂಟಿ ನಿರ್ದೇಶಕರಾದ ಸಿದ್ದಯ್ಯ, ಉಪನಿರ್ದೇಶಕರಾದ ಗುರುಚನ್ನಬಸಪ್ಪ, ಪುತ್ತೂರು ಮೀನುಗಾರಿಕೆ ಸಹಾಯಕ ನಿರ್ದೇಶಕರಾದ ಮಂಜುಳಾ ಶೆಣೈ, ಮಾಜಿ ಅಧ್ಯಕ್ಷೆ ಹಾಲಿ ಸದಸ್ಯರಾದ ಪರಮೇಶ್ವರಿ ಕೆ ಗೌಡ, ಮಾಜಿ ಉಪಾಧ್ಯಕ್ಷರು ಹಾಲಿ ಸದಸ್ಯರಾದ ಗಂಗಾಧರ ಪೂಜಾರಿ, ಸದಸ್ಯರಾದ ಬಾಲಕೃಷ್ಣ ಗೌಡ, ಶಿವಣ್ಣ ಗೌಡ, ಪದ್ಮುಂಜ ಸಿ.ಎ ಬ್ಯಾಂಕ್ ಅಧ್ಯಕ್ಷರಾದ ರಕ್ಷಿತ್ ಪಣೆಕ್ಕರ, ನಿರ್ದೇಶಕಿ ಶೀಲಾವತಿ ಬಾಬುಗೌಡ ಮುಗೇರಡ್ಕ, ಯುವ ಉದ್ಯಮಿ ದೇವಿಪ್ರಸಾದ್ ಗೌಡ ಕಡಮ್ಮಾಜೆ, ಮುಗೇರಡ್ಕ ಮೂವರು ದೈವಸ್ಥಾನದ ಆಡಳಿತ ಮೊಕ್ತೇಶರರಾದ ಮನೋಹರ ಗೌಡ ಅಂತರ, ಅಶೋಕ್ ಭಟ್ ಕಾನಿಸ್ಕ ಮೊಗ್ರು, ಕೃಷ್ಣಯ್ಯ ಆಚಾರ್ಯ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Exit mobile version