ಉಜಿರೆ: ವಿನ್ ನ್ಯಾಷನಲ್ ಸ್ಪೆಲ್ ಬೀ ವತಿಯಿಂದ ಡಿ.30ರಂದು ಸರದಾರ ವಲ್ಲಭಬಾಯಿ ಪಟೇಲ್ ಇಂಟರ್ನ್ಯಾಷನಲ್ ಸ್ಕೂಲ್ ಕೊಯಂಬತ್ತೂರ್ ಎಂಬಲ್ಲಿ ನಡೆಸಿದ ‘ರಾಷ್ಟ್ರಮಟ್ಟದ ಸ್ಪೆಲ್ ಬಿ’ ಸ್ಪರ್ಧೆಯಲ್ಲಿ ಅನುಗ್ರಹ ಇಂಗ್ಲೀಷ್ ಮಾಧ್ಯಮ ಶಾಲೆ, ಉಜಿರೆ ಇಲ್ಲಿಯ ವಿದ್ಯಾರ್ಥಿಗಳು ವಿಶೇಷ ಸಾಧನೆಯನ್ನು ಮಾಡಿರುತ್ತಾರೆ.
ಉಜಿರೆಯ ವಿನೋದ್ ಡಿಸೋಜ – ಜೋವಿಟಾ ಸೆರಾವೊ ರವರ ಪುತ್ರ ಮೂರನೇ ತರಗತಿಯ ವಿದ್ಯಾರ್ಥಿ ವಿರೋನ್ ಡಿಸೋಜಾ ಹದಿನಾರನೇ ರ‍್ಯಾಂಕನ್ನೂ, ಧರ್ಮಸ್ಥಳ ಯಶೋದರಾ – ಶುಭ ದಂಪತಿಯ ಪುತ್ರ ಡಿ.ಸ್ವರೂಪ್ ಕೃಷ್ಣ ಹತ್ತೊಂಬತ್ತನೆ ರ‍್ಯಾಂಕನ್ನು ಪಡೆದು ಶಾಲೆಗೆ ಕೀರ್ತಿಯನ್ನು ತಂದು ಕೊಟ್ಟಿರುತ್ತಾರೆ.
ಇವರನ್ನು ಶಾಲಾ ಸಂಚಾಲಕರಾದ ಫಾ! ಜೇಮ್ಸ್ ಡಿಸೋಜಾ ಮತ್ತು ಶಾಲಾ ಪ್ರಾಂಶುಪಾಲರಾದ ಫಾ! ವಿಜಯ್ ಲೋಬೋ ರವರು ಅಭಿನಂದಿಸಿದ್ದಾರೆ.