ಉರುವಾಲು: ಕೊರಿಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಚಪ್ಪರ ಮುಹೂರ್ತ ಹಾಗೂ ಅನ್ನಚತ್ರದ ಸಭಾಂಗಣದ ದಾರಂದ ಮುಹೂರ್ತ ಜ.5 ರಂದು ದೇವಾಲಯದ ಆವರಣದಲ್ಲಿ ಉದ್ಯಮಿ ದೇವದಾಸ್ ಶೆಟ್ಟಿ ಇಬರೋಡಿ ಬದ್ಯಾರು ಉಪಸ್ಥಿತಿಯಲ್ಲಿ ನಡೆಯಿತು.
ಕ್ಷೇತ್ರದ ಅರ್ಚಕ ಕಾರ್ತಿಕ್ ಹೆಗ್ಡೆ ಪೌರೋಹಿತ್ಯದಲ್ಲಿ ವೈದಿಕ ವಿಧಿವಿಧಾನಗಳನ್ನು ನೆರವೆರಿಸಿದರು.
ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಪ್ರಸನ್ನ ದರ್ಬೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಾಸಪ್ಪ ಗೌಡ, ಕಾರ್ಯದರ್ಶಿ ಸುನೀಲ್ ಅಣಾವು, ಆಡಳಿತ ಮೊಕ್ತೇಸರ ಯೋಗೀಶ್ ಪೂಜಾರಿ ಕಡ್ತಿಲ, ಪವಿತ್ರಪಾಣಿ ಹರೀಶ್ ಕಾಳಿಂಜ, ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕಡ್ತಿಲ, ಕಾರ್ಯದರ್ಶಿ ವಿಜಯ ಕುಮಾರ್ ಕಲ್ಲಳಿಕೆ, ಕೋಶಾಧಿಕಾರಿ ಉದಯ ಕಾಳಿಂಜ, ಕಣಿಯೂರು ಗ್ರಾ.ಪಂ.ಅಧ್ಯಕ್ಷ ಯಶವಂತ್, ತಣ್ಣೀರುಪಂತ ಗ್ರಾ.ಪಂ.ಸದಸ್ಯ ಸಾಮ್ರಾಟ್, ಚಪ್ಪರ ಸಮಿತಿಯ ದೇಜಪ್ಪ, ಮೊಕ್ತೇಸರರಾದ ಶಂಕರನಾರಾಯಣ ಭಟ್, ಅನಿತಾ ಕೇಶವ ಪೂಜಾರಿ, ವಾರಿಜ ವಿ.ಶೆಟ್ಟಿ, ದೇಜಪ್ಪ ಗೌಡ, ಸುಶಾನ್ ರೈ, ಜಲಜಾಕ್ಷಿ, ನಿರೂಪ ಆಳ್ವ, ಕೇಶವತಿ, ಲಲಿತಾ, ಸೇಸಪ್ಪ ರೈ ಕೊರಿಂಜ, ಪ್ರವೀಣ್ ರೈ ಕುಪ್ಪೆಟ್ಟಿ, ರಂಜಿತ್ ಚಾರ್ಮಾಡಿ ಹಾಗೂ ವಿವಿಧ ಸಮಿತಿಯ ಸಂಚಾಲಕರು, ಸಹಸಂಚಾಲಕರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಉದ್ಯಮಿ ದೇವದಾಸ್ ಶೆಟ್ಟಿ ಇಬರೋಡಿ ಬದ್ಯಾರು ಉಪಸ್ಥಿತಿಯಲ್ಲಿ ಚಪ್ಪರ ಮುಹೂರ್ತ ನಡೆಯಲಿದೆ.