Site icon Suddi Belthangady

ಅಳದಂಗಡಿ: ಬೈಕ್-ಕಾರು ಅಪಘಾತ: ಸವಾರರು ಗಂಭೀರ

ಬೆಳ್ತಂಗಡಿ: ಅಳದಂಗಡಿ ಸಮೀಪ ಬೈಕ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿದ್ದು ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಾಯಾಳುಗಳು ಬಡಗಕಾರಂದೂರು ನಿವಾಸಿ ಸೋಮಯ್ಯ ಹಾಗೂ ಲಾಯಿಲ ಗ್ರಾಮದ ನಿವಾಸಿ ಕೃಷ್ಣ ಎಂಬವರಾಗಿದ್ದಾರೆ.

ಬುಧವಾರ ರಾತ್ರಿಯ ವೇಳೆ ಅಪಘಾತ ಸಂಭವಿಸಿದ್ದು ಕಾರು ಹಾಗೂ ಬೈಕ್ ಎದುರು ಬದುರಾಗಿ ಡಿಕ್ಕಿ ಹೊಡೆದಿದೆ.ಹೊಡೆತದ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ಬೈಕ್ ಸವಾರರಿಬ್ಬರೂ ಗಂಭೀರವಾಗಿ ಗಾಯಗೊಂಡಿದ್ದು, ಇಬ್ಬರನ್ನೂ ಸ್ಥಳೀಯರ ಸಹಕಾರದೊಂದಿಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

Exit mobile version