Site icon Suddi Belthangady

ಭೂಸೇನೆಯಲ್ಲಿ 22 ವರ್ಷ ಕರ್ತವ್ಯ ಸಲ್ಲಿಸಿ ನಿವೃತ್ತಿ‌ ಹೊಂದಿದ ಮುಂಡಾಜೆಯ ಫ್ರಾನ್ಸಿಸ್ ಜೆ

ಬೆಳ್ತಂಗಡಿ: ಮೂಲತಃ ಧರ್ಮಸ್ಥಳ ಗ್ರಾಮದ ನೇರ್ತನೆ ನಿವಾಸಿ ಎಬ್ರಿಯಲ್ ಇ.ಎಮ್ ಮತ್ತು ಇ.ಎಮ್ ಮೇರಿ ದಂಪತಿಯ ಪುತ್ರ, ಪ್ರಸ್ತುತ ಸೋಮಂತಡ್ಕದಲ್ಲಿ ನೆಲೆಸಿರುವ ಭೂ ಸೇನೆಯ ಯೋಧ ಫ್ರಾನ್ಸಿಸ್ ಜೆ ಅವರು ಭಾರತೀಯ ಭೂ ಸೇನೆಯಲ್ಲಿ 22 ವರ್ಷ ಕರ್ತವ್ಯ ಸಲ್ಲಿಸಿ ಡಿ.31 ರಂದು ನಿವೃತ್ತರಾಗಿದ್ದಾರೆ‌.

ಧರ್ಮಸ್ಥಳ ಎಸ್‌ಡಿಎಂ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪೂರೈಸಿದ ಅವರು ಮುಂಡಾಜೆ ಪ.ಪೂ ಕಾಲೇಜಿನಲ್ಲಿ ಪ.ಪೂ ಶಿಕ್ಷಣ ಪಡೆದಿದ್ದಾರೆ.2002ರಲ್ಲಿ ಮಂಗಳೂರಿನಲ್ಲಿ ನಡೆದ ಸೇನಾ ಆಯ್ಕೆ ಶಿಬಿರದಲ್ಲಿ ನೇಮಕಾತಿ ಒಡೆದು ಅವರು ಭೋಪಾಲ್ ನಲ್ಲಿ ಇಲೆಕ್ಟ್ರಾನಿಕಲ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪೂರೈಸಿ ಅದೇ ವಿಭಾಗದಲ್ಲಿ 22 ವರ್ಷ ಕರ್ತವ್ಯ ಸಲ್ಲಿಸಿ ನಿವೃತ್ತರಾಗಿದ್ದಾರೆ.

ಭೋಪಾಲ್ ನಲ್ಲಿ‌ ಸಿಪಾಯಿ ಹುದ್ದೆಯಲ್ಲಿ ಸೇನಾ ತರಬೇತಿ ಮುಗಿಸಿದ್ದ ಅವರು ಮಧುರಾ(ಯು.ಪಿ), ದೆಹಲಿ, ಸಿಲಿಗುಡಿ(ಪ.ಬಂಗಾಳ), ಸಿಕಂದರಾಬಾದ್ ಶ್ರೀನಗರ, ರಾಜಸ್ಥಾನ, ಬುಜ್ (ಗುಜರಾತ್) ಇಲ್ಲೆಲ್ಲಾ ಕರ್ತವ್ಯ ಸಲ್ಲಿಸಿ ಹವಾಲ್ದಾರ್ ಹುದ್ದೆಗೇರಿ ನಿವೃತ್ತರಾಗಿದ್ದಾರೆ.

ಅವರ ಕರ್ತವ್ಯದ ಅವಧಿಯಲ್ಲಿ ಅವರಿಗೆ 9 ವರ್ಷದ ಸೇವೆಗೆ ಪದಕ, 20 ವರ್ಷ ಸೇವೆಗೆ ಪದಕ, ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ವರ್ಷದ ಪದಕ, ಶ್ರೀ ನಗರ ಆರ್ ಆರ್ ನಲ್ಲಿ ಕರ್ತವ್ಯ ಸಲ್ಲಿಸಿದ್ದಕ್ಕಾಗಿ ಪದಕ ಪುರಸ್ಕೃತರಾಗಿದ್ದಾರೆ.

ಮುಂದಕ್ಕೆ ಅವರು ಪತ್ನಿ ಬೀನಾ ಫ್ರಾನ್ಸಿಸ್, ಮೂವರು ಮಕ್ಕಳಾದ ಫಿಯಾ ಫ್ರಾನ್ಸಿಸ್, ಫೆಬಿನ್ ಫ್ರಾನ್ಸಿಸ್ ಮತ್ತು ಅನ್ವಿರೋಸ್ ಫ್ರಾನ್ಸಿಸ್ ಅವರ ಜೊತೆ ನಿವೃತ್ತಿಯ ಜೀವನ ಸಾಗಿಸಲಿದ್ದಾರೆ.

ಮುಂಡಾಜೆಯಲ್ಲಿ ಭವ್ಯ ಸ್ವಾಗತ: ಅವರು ಕರ್ತವ್ಯ ಸಲ್ಲಿಸಿ ಉಜಿರೆಗೆ ಬಳಿಕ ಸೋಮಂತಡ್ಕಕ್ಕೆ ಆಗಮಿಸುತ್ತಿದ್ದಂತೆ ಕೆಳಗಿನ‌ಪೇಟೆಯ ವೃತ್ತದ ಬಳಿ ಅವರಿಗೆ ಭವ್ಯ ಸ್ವಾಗತ ಕೋರಲಾಯಿತು.

ಈ‌ ಸಂದರ್ಭ ಗೌರವಾರ್ಪಣೆ ನಡೆಸಿ ಅಭಿಮಾನ ತೋರಿದರು.

ಅಶ್ರಫ್ ಆಲಿಕುಂಞಿ ಮುಂಡಾಜೆ, ಗ್ರಾಮಾಭಿವೃದ್ದಿ ಯೋಜನೆಯ ಸೇವಾ ಪ್ರತಿನಿಧಿ ದಿಶಾ ಇವರು ಕಾರ್ಯಕ್ರಮ ಸಂಯೋಜಿಸಿದರು.

Exit mobile version