ಉಜಿರೆ: ನಿರಂತರ ಕಲಿಕೆಯು ಸಮಾಜ ನಮ್ಮನ್ನು ಗುರುತಿಸುವಂತೆ ಮಾಡುವುದು.ವಿಜ್ಞಾನ ವಿದ್ಯಾರ್ಥಿಗಳು ಉತ್ತಮ ಸಂಸ್ಕಾರದೊಂದಿಗೆ ಹೊಸ ಹೊಸ ವಿಷಯಗಳ ಕಲಿಕೆಯಲ್ಲಿ ಕುತೂಹಲ ಬೆಳೆಸಿಕೊಂಡಾಗ ವಿಜ್ಞಾನ ಕ್ಷೇತ್ರದಲ್ಲಿ ಬದಲಾವಣೆಗಳ ಜೊತೆಗೆ ಹೊಸ ಕ್ರಾಂತಿಯನ್ನುಂಟು ಮಾಡಲು ಸಾಧ್ಯ.ವೈಯಕ್ತಿಕ ಕುಶಿಗಳನ್ನು ಬದಿಗಿಟ್ಟು ಜ್ಞಾನಾರ್ಜನೆಯಲ್ಲಿ ಮನಸನ್ನು ಕೇಂದ್ರೀಕರಿಸಿ, ಮೊಬೈಲ್ ಬಿಟ್ಟು ಪುಸ್ತಕದ ಗೀಳು ಬೆಳೆಸಿಕೊಳ್ಳಿ, ತಿಳುವಳಿಕೆಯಿಂದ ಕೂಡಿದ ಯುವ ಮನಸ್ಸುಗಳು ದೇಶದ ಆಸ್ತಿಯೆಂದು ಇಸ್ರೋ ಸಂಸ್ಥೆಯಲ್ಲಿ ಹಿರಿಯ ವಿಜ್ಞಾನಿಯಾಗಿರುವ ಪಣಿಯಾಡಿ ವಾಸುದೇವ ರಾವ್ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸಂಸ್ಕಾರಯುತ ಸಮಾಜದ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಬಹಳ ಹಿರಿದು, ಓದುಗಾರಿಕೆ, ಸಂಘಟನಾಶಕ್ತಿ, ಪ್ರತಿಭೆ, ಜ್ಞಾನ, ಸಹಕಾರ ಮನೋಭಾವನೆ ನಿಮ್ಮೊಡನೆ ಒಡಮೂಡಿಸಿಕೊಂಡು ಸಮಾಜದಲ್ಲಿ ಉನ್ನತ ಮಟ್ಟಕೇರಿ ಎಂದು ಕಾಲೇಜಿನ ವಾರ್ಷಿಕೋತ್ಸವದ ವೇದಿಕೆಯಲ್ಲಿ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿಯಾಗಿರುವ ಡಾ. ಸತೀಶ್ಚಂದ್ರ.ಎಸ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಂಶುಪಾಲರಾದ ಸುನಿಲ್ ಪಂಡಿತ್ ರವರು ಕಾಲೇಜಿನ ವಾರ್ಷಿಕ ವರದಿಯನ್ನು ವಾಚಿಸಿದರು.ಕಾಲೇಜಿನ ವಿದ್ಯಾರ್ಥಿ ನಾಯಕ ಹರ್ಷಿತ್ ಎ.ವಿ ಹಾಗೂ ಕಾರ್ಯದರ್ಶಿ ವರುಣ್ ಕುಮಾರ್ ಹೆಚ್.ಎಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಲಿಕೆಯಲ್ಲಿ 2022-23ರ ಶೈಕ್ಷಣಿಕ ವರ್ಷದಲ್ಲಿ ಉತ್ತಮ ಸಾಧನೆ ತೋರಿದ್ದ ಹಿರಿಯ ವಿದ್ಯಾರ್ಥಿಗಳನ್ನು ಸನ್ಮಾನಿಲಾಯಿತು.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಗ್ರಂಥಾಲಯ ಬಳಕೆಯಲ್ಲಿ ಉತ್ತಮಿಕೆ ಮೆರೆದೆ ವಿದ್ಯಾರ್ಥಿಗಳಿಗೆ ‘ವರ್ಷದ ಉತ್ತಮ ಓದುಗ’ ಪ್ರಶಸ್ತಿ ಜೊತೆಗೆ ಕೀರ್ತಿಶೇಷ ಶ್ರೀ ಯಶೋವರ್ಮ ಸ್ಮರಣಾರ್ಥ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡೆ, ಹಾಗೂ ವಿಜ್ಞಾನ ವಿಭಾಗದಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಕಾಲೇಜಿನ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು.
ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಟಿ. ಕೃಷ್ಣಮೂರ್ತಿ ದಂಪತಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಲಾಯಿತು.
ವಿದ್ಯಾರ್ಥಿಗಳು ವಂದಿಸಿದರು.ಗಣಿತ ವಿಭಾಗದ ಮುಖ್ಯಸ್ಥೆಯಾಗಿರುವ ಧನಲಕ್ಷ್ಮಿ ಸ್ವಾಗತಿಸಿದರು.ಜೀವಶಾಸ್ತ್ರದ ಮುಖ್ಯಸ್ಥೆ ವಾಣಿ.ಎಂ.ಎ. ಹಾಗೂ ಗಣಿತಶಾಸ್ತ್ರ ಉಪನ್ಯಾಸಕಿ ಕು.ಪ್ರಿಯ.ಎಂ.ಹೆಚ್ ನಿರೂಪಿಸಿದರು.
ಸಂಸ್ಥೆಯ ವಿವಿಧ ವಿಭಾಗಗಳಲ್ಲಿ ಕಾರ್ಯನಿರತ ಕಲಾಸಕ್ತರು, ಉಪನ್ಯಾಸಕರು, ಪ್ರಾಂಶುಪಾಲರು, ವಿದ್ಯಾರ್ಥಿಗಳ ಹೆತ್ತವರು ಉಪಸ್ಥಿತರಿದ್ದರು.
ನಂತರ ವಿದ್ಯಾರ್ಥಿಗಳಿಂದ ಅದ್ಧೂರಿ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.