Site icon Suddi Belthangady

ಉಜಿರೆ: ಮಿತ್ರ ಯುವಕ ಮಂಡಲ, ಮಿತ್ರ ಮಹಿಳಾ ಮಂಡಳಿ ಅರಳಿ ಇದರ ಜಂಟಿ ಆಶ್ರಯದಲ್ಲಿ 27ನೇ ವರ್ಷದ ಪ್ರತಿಭಾ ಸಂಗಮ

ಉಜಿರೆ: ಮಿತ್ರ ಯುವಕ ಮಂಡಲ(ರಿ), ಮಿತ್ರ ಮಹಿಳಾ ಮಂಡಳಿ ಅರಳಿ ಉಜಿರೆ ಇದರ ಜಂಟಿ ಆಶ್ರಯದಲ್ಲಿ 27ನೇ ವರ್ಷದ ಪ್ರತಿಭಾ ಸಂಗಮವು ಡಿ.30ರಂದು ಮಿತ್ರ ಯುವಕ ಮಂಡಲದ ರಂಗಮಂದಿರ ವೇದಿಕೆಯಲ್ಲಿ ನಡೆಯಿತು.

ಮೊದಲಿಗೆ ಹೊಸದಾಗಿ ರಚನೆಗೊಂಡ ಶ್ರೀ ಬ್ರಹ್ಮದೇವರ ಭಜನಾ ತಂಡ ಅರಳಿ ಇವರ ಕುಣಿತ ಭಜನೆಯ ಮೂಲಕ ಆರಂಭವಾಗಿ ವತ್ಸಲ ಗೌಡ ಇವರು ಎಲ್ಲರನ್ನೂ ಪ್ರೀತಿಯಿಂದ ಸ್ವಾಗತಿಸಿದರು.

ಸಭಾ ಕಾರ್ಯಕ್ರಮದಲ್ಲಿ ಯುವರಾಜ್ ಅರಳಿ ಅವರು ಅಧ್ಯಕ್ಷತೆ ವಹಿಸಿದ್ದರು.ಕೆ ಧನಂಜಯ್ ರಾವ್ ಕಾರ್ಯಕ್ರಮವನ್ನು ಉದ್ಘಾಟಿಸಿದರು ಹಾಗೂ ಮುಖ್ಯ ಅತಿಥಿಗಳಾಗಿ ಉಷಾಕಿರಣ್ ಕಾರಂತ್, ಬಾಲಕೃಷ್ಣ ಕೊರಮೇರು, ಸದಾಶಿವ ಹೆಗಡೆ ಉಪಸ್ಥಿತರಿದ್ದು ಸನ್ಮಾನಿತರಾಗಿ ಜಯಾನಂದ ಘಟಕಾಧಿಕಾರಿ ಮುಖ್ಯಮಂತ್ರಿ ಚಿನ್ನದ ಪದಕ ವಿಜೇತರು ಇದ್ದರು.

ಅದರ ಜೊತೆಗೆ ಗೌರವ ಉಪಸ್ಥಿತಿಯಲ್ಲಿ ಚೇತನ್ ಅರಳಿ, ಸರಳಾಕ್ಷಿ ಪುರುಷೋತ್ತಮ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವೇದಿಕೆಯಲ್ಲಿ ಬಹುಮಾನ ವಿತರಣೆ ನಡೆಸಿ ರಾಜೇಶ್ ಇವರು ಶೈಕ್ಷಣಿಕ ವರದಿ ಮಂಡಿಸಿದರು.ಕಾರ್ಯಕ್ರಮದ ನಿರೂಪಣೆಯನ್ನು ನಿಶಿತ್ ಬಂಗೇರ ನೆರವೇರಿಸಿ, ಸಂತೋಷ್ ಸಾಲಿಯನ್ ಎಲ್ಲರಿಗೂ ಧನ್ಯವಾದವಿತ್ತರು.

ಪ್ರತಿ ವರ್ಷದಂತೆ ಊರಿನ ಪ್ರತಿಭೆಗಳಿಂದ ಈ ವರ್ಷವು ಸಾಂಸ್ಕೃತಿಕ ಕಾರ್ಯಕ್ರಮಗಳು ವೇದಿಕೆಯಲ್ಲಿ ಅನಾವರಣಗೊಂಡು ಗೆಂದಗಿಡಿ ಎಂಬ ವಿಶೇಷ ನಾಟಕ ಮೂಲಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು.

Exit mobile version