Site icon Suddi Belthangady

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸ್ಥಳಾಂತರಗೊಂಡು ಶುಭಾರಂಭ

ಮಡಂತ್ಯಾರು: ಮಡಂತ್ಯಾರು ಪೇಟೆಯಲ್ಲಿರುವ ಸೇಕ್ರೆಡ್ ಹಾರ್ಟ್ ಚರ್ಚ್ ಕಮರ್ಶಿಯಲ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಚರಿಸುತ್ತಿದ್ದ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು ಮಡಂತ್ಯಾರು ಕಾಲೇಜು ರಸ್ತೆಯ ನೊವಾ ಪ್ಲಾಜಾದ ನೆಲ ಮಹಡಿಗೆ ಜ.1ರಂದು ಸ್ಥಳಾಂತರಗೊಂಡು ಶುಭಾರಂಭಗೊಂಡಿತು.

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ಧರ್ಮಗುರು ವ.ಫಾ.ಸ್ಟ್ಯಾನಿ ಗೋವಿಯಸ್ ಉದ್ಘಾಟಿಸಿ ಆಶೀರ್ವಚನಗೈದರು.

ಈ ಸಂದರ್ಭದಲ್ಲಿ ಅಧ್ಯಕ್ಷ ಲೆನ್ಸಿ ಪಿಂಟೊ, ಮುಖ್ಯ ಸಲಹೆಗಾರ ಮೋಹನ್ ಪೂಜಾರಿ ಕಂಡೆನ್ತ್ಯಾರ್, ಆಡಳಿತ ಮಂಡಳಿ ನಿರ್ದೇಶಕರು, ಸಿಬಂದಿ ವರ್ಗ, ಗಣ್ಯರು ಭಾಗವಹಿಸಿದ್ದರು.

ಫ್ರಾನ್ಸಿಸ್ ವಿ.ವಿ ಕಾರ್ಯಕ್ರಮ ನಿರೂಪಿಸಿದರು.ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಲೇರಿಯನ್ ಡಿ’ಸೋಜಾ ವಂದಿಸಿದರು.

Exit mobile version