Site icon Suddi Belthangady

ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್ ನ ಸೇಕ್ರೆಡ್ ಹಾರ್ಟ್ ವಾಳೆಯಲ್ಲಿ ಮನೆ ಹಸ್ತಾಂತರ ಕಾರ್ಯಕ್ರಮ

ಬೆಳ್ತಂಗಡಿ: ಹೋಲಿ ರಿಡೀಮರ್ ಚರ್ಚ್ ಇಲ್ಲಿನ ಸೇಕ್ರೆಡ್ ಹಾರ್ಟ್ ವಾಳೆಯಲ್ಲಿ ಸಿ.ಒ.ಡಿ.ಪಿ. ಹಾಗೂ ಎಸ್.ವಿ.ಪಿ ಇದರ ಜಂಟಿ ಆಶ್ರಯದಲ್ಲಿ ನೂತನವಾಗಿ 3,00,000 ವೆಚ್ಚದಲ್ಲಿ 2 ತಿಂಗಳ ಒಳಗೆ ದುರಸ್ತಿಯಾದ ಮನೆಯನ್ನು ಡಿ.29ರಂದು ಹಸ್ತಾಂತರ ಮಾಡಲಾಯಿತು.

ಮನೆಯ ಆಶೀರ್ವಚನವನ್ನು ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚಿನ ಪ್ರಧಾನ ಗುರು ಅ.ವಂ.ಫಾ. ವೋಲ್ಟರ್ ಡಿಮೆಲ್ಲೊರವರು ನೆರವೇರಿಸಿ ದೀಪ ಬೆಳಗಿದರು ಹಾಗೂ ಹೋಲಿ ರಿಡೀಮರ್ ಆಂಗ್ಲ ಮಾದ್ಯಮ ಶಾಲೆಯ ಪ್ರಾಂಶುಪಾಲ ವಂ.ಫಾ.ಕ್ಲಿಫರ್ಡ್ ಸೈಮನ್ ಪಿಂಟೋ, ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ವಾಲ್ಟರ್ ಮೋನಿಸ್, ಕಾರ್ಯದರ್ಶಿ ಗಿಲ್ಬರ್ಟ್‌ ಪಿಂಟೋ, ವಾಳೆಯ ಗುರ್ಕಾರ್ ಜೆಸಿಂತಾ ಮೋನಿಸ್, ಎಸ್.ವಿ.ಪಿ ಅಧ್ಯಕ್ಷರು ಕು.ತಿಯೋಫಿಲ ಹಾಗೂ ಮನೆಯ ಸದಸ್ಯರಾದ ಸ್ಟ್ಯಾನಿ, ಹಿಲ್ಡಾ, ಮೊನಿಕಾ, ರೋಹಿತ್ ಸೇರಿದಂತೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಮನೆಯ ಕಾಮಗಾರಿ ಜವಾಬ್ದಾರಿಯನ್ನು ತೋಮಸ್ ಪಿಂಟೋರವರು ವಹಿಸಿದ್ದರು.

Exit mobile version