ಇಂದಬೆಟ್ಟು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಡಿ.30ರಂದು ಮಹಿಳಾ ಹಾಗೂ ಮಕ್ಕಳ ಗ್ರಾಮ ಸಭೆ ಸರ್ಕಾರಿ ಪ್ರೌಢಶಾಲೆ ಬಂಗಾಡಿ ಇದರ ವಿದ್ಯಾರ್ಥಿ ಸಚಿನ್ ಕುತ್ರಬೆಟ್ಟು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಸಿ.ಆರ್.ಪಿ ರಮೇಶ್ ಪೈಲಾರ್ ರವರು ಮಾಹಿತಿ ನೀಡಿದರು ಮತ್ತು ಮಕ್ಕಳ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.ಪ್ರಾಥಮಿಕ ಆರೋಗ್ಯ ಕೇಂದ್ರ ಇಂದಬೆಟ್ಟು ಇದರ CHO ಕು.ಸೌಮ್ಯ ರವರು ಮಹಿಳಾ ಹಾಗೂ ಆರೋಗ್ಯ ವಿಷಯದ ಬಗ್ಗೆ ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಮಹಿಳಾ ಹಾಗೂ ಮಕ್ಕಳ ಕಾವಲು ಸಮಿತಿ ರಚನೆ ಮಾಡಲಾಯಿತು.ಮಕ್ಕಳ ಹಾಗೂ ಮಹಿಳೆಯರ ಸಮಸ್ಯೆ ಹಾಗೂ ಬೇಡಿಕೆಗಳನ್ನು ಆಲಿಸಲಾಯಿತು.
ಕಾರ್ಯಕ್ರಮದಲ್ಲಿ ಪಂಚಾಯತ್ ಅಧ್ಯಕ್ಷೆ ಆಶಾಲತಾ, ಮಾಜಿ ಅಧ್ಯಕ್ಷ ಅನಂದ ಅಡಿಲು, ಸದಸ್ಯರಾದ ಶ್ರೀಕಾಂತ್ ಎಸ್ ಇಂದಬೆಟ್ಟು, ಸುಮಿತ್ರಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಶ್ಮಿ, ಕಾರ್ಯದರ್ಶಿ ಗಿರಿಯಪ್ಪ ಗೌಡ, ಸಿಬ್ಬಂದಿ ವರ್ಗದವರು, ಶಾಲಾ ಶಿಕ್ಷಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟ ಸದಸ್ಯರು, ಮಹಿಳಾ ಗ್ರಾಮಸ್ಥರು, ಸರ್ಕಾರಿ ಶಾಲೆ ದೇವನಾರಿ, ಕಲ್ಲಾಜೆ, ಪ್ರಾಥಮಿಕ ಮತ್ತು ಪ್ರೌಢ ಶಾಲೆ ಬಂಗಾಡಿ, ಮರಿಯಾಂಬಿಕ ಆಂಗ್ಲ ಮಾಧ್ಯಮ ಶಾಲೆ ಬೆದ್ರಬೆಟ್ಟು ಇದರ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಮಕ್ಕಳ ಹಾಗೂ ಮಹಿಳಾ ಗ್ರಾಮ ಸಭೆಯನ್ನು ಯಶಸ್ವಿಗೊಳಿಸಿದರು.