Site icon Suddi Belthangady

ಸಾಂಸ್ಕೃತಿಕ ಸ್ಪರ್ಧೆ- ವಾಣಿ ಕಾಲೇಜಿಗೆ ಸಮಗ್ರ ಪ್ರಶಸ್ತಿ

ಬೆಳ್ತಂಗಡಿ ಪ್ರಥಮ ದರ್ಜೆ ಕಾಲೇಜಿನ ಮ್ಯಾನೇಜ್‌ಮೆಂಟ್ ಸಂಘ ಆಯೋಜಿಸಿದ್ದ ತಾಲೂಕಿನ ಪಿಯುಸಿ ವಿದ್ಯಾರ್ಥಿಗಳಿಗೆ IGNITE 2K23 ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಾಣಿ ಕಾಲೇಜಿಗೆ ಸಮಗ್ರ ಪ್ರಶಸ್ತಿ ಬಂದಿರುತ್ತದೆ.

ಗೀತ ಗಾಯನದಲ್ಲಿ ಸಮನ್ವಿತ್ ಕುಮಾರ್ ಪ್ರಥಮ, ಏಕಪಾತ್ರಾಭಿನಯದಲ್ಲಿ ಸಾತ್ವಿಕ್.ಎಂ. ಪ್ರಥಮ, ರಸಪ್ರಶ್ನೆಯಲ್ಲಿ ಗಗನ್ ಮತ್ತು ಅನ್ವೇಷ್ ಪ್ರಥಮ, ಮ್ಯಾನೇಜ್‌ಮೆಂಟ್ ಗೇಮ್ಸ್‌ಲ್ಲಿ ಸಾತ್ವಿಕ್ ಸ್ಕಂದರಾಜ್ ಮತ್ತು ನಮ್ರತಾ ದ್ವಿತೀಯ, ಕ್ರಾಪ್ಟ್ ಮತ್ತು ಮುಖವರ್ಣಿಕೆಯಲ್ಲಿ ಧನುಷ್ ಮತ್ತು ಶಯನ್ ದ್ವಿತೀಯ ಬಹುಮಾನಗಳನ್ನು ಗಳಿಸಿ ವಾಣಿ ಪದವಿ ಪೂರ್ವ ಕಾಲೇಜಿಗೆ ಸಮಗ್ರ ಪ್ರಶಸ್ತಿಯನ್ನು ತಂದಿರುತ್ತಾರೆ.

Exit mobile version