Site icon Suddi Belthangady

ಬಳಂಜ: ಬೋಂಟ್ರೊಟ್ಟುಗುತ್ತು ದೈವಸ್ಥಾನ: ಚಾವಡಿಯಲ್ಲಿ ದೈವಗಳ ಪ್ರತಿಷ್ಠೆ, ಕಲಶಾಭಿಷೇಕ

ಬಳಂಜ: ಶ್ರೀ ಧರ್ಮರಸು ದೈವ ಕೊಡಮಣಿತ್ತಾಯ ಮತ್ತು ಸಪರಿವಾರ ದೈವಗಳ ಸೇವಾ ಟ್ರಸ್ಟ್‌ ಮತ್ತು ಕಲಶಾಭಿಷೇಕ ಸಮಿತಿ, ಬೋಂಟ್ರೊಟ್ಟು ಗುತ್ತು ಕ್ಷೇತ್ರದಲ್ಲಿ ಡಿ.29ರಂದು ಚಾವಡಿಯಲ್ಲಿ ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ಪರ್ವ ನಡೆಯಿತು.

ಈ ಸಂದರ್ಭದಲ್ಲಿ ಕಲಶಾಭಿಷೇಕ ಸಮಿತಿ ಅಧ್ಯಕ್ಷ ಮಹಾಬಲ ಪೂಜಾರಿ, ಕಾರ್ಯದರ್ಶಿ ಗಣೇಶ್‌ ಪೂಜಾರಿ, ಟ್ರಸ್ಟ್‌ ಅಧ್ಯಕ್ಷ ಹರೀಶ್‌ ಕೆ ಪೂಜಾರಿ ಬೈಲಬರಿ, ಕಾರ್ಯದರ್ಶಿ ಸಂತೋಷ್ ಪಿ ಕೋಟ್ಯಾನ್ ಬಳಂಜ, ಕೋಶಾಧಿಕಾರಿ ಪ್ರವೀಣ್ ಕುಮಾರ್ ಹೆಚ್., ಟ್ರಸ್ಟ್ ಉಪಾಧ್ಯಕ್ಷ ಬಾಲಕೃಷ್ಣ ಪೂಜಾರಿ ಯೈಕುರಿ, ಟ್ರಸ್ಟಿ ಸದಸ್ಯರಾದ ಕೃಷ್ಣಪ್ಪ ಪೂಜಾರಿ, ಸದಾನಂದ ಪೂಜಾರಿ, ಬಳಂಜ ಗ್ರಾ.ಪಂ ಉಪಾಧ್ಯಾಕ್ಷ ಯಶೋಧರ ಶೆಟ್ಟಿ, ಅಳದಂಗಡಿ ಸಿಎ ಬ್ಯಾಂಕ್ ನಿರ್ದೇಶಕ ಹೆಚ್.ದೇಜಪ್ಪ ಪೂಜಾರಿ, ಅನಿಲ್‌, ಅಖಿಲ್‌, ಅವಿನಾಶ್, ಸುಕೇಶ್‌, ಉದ್ಯಮಿ ಜಗದೀಶ್ ಪೆರಾಜೆ, ಶ್ಯಾಮ್ ಬಂಗೇರ ಪೆರಾಜೆ, ರವೀಂದ್ರ ಪೂಜಾರಿ ಹೇವ, ಹರೀಶ್ ರೈ ಬರಮೇಲು, ಆನಂದ ಶೆಟ್ಟಿ, ಅವಿನಾಶ್‌, ಅಶೋಕ್‌ ಮುಡಾಯಿಬೆಟ್ಟು, ಪ್ರವೀಣ್‌ ಪೂಜಾರಿ ಲಾಂತ್ಯಾರು ಹಾಗೂ ಸಮಿತಿ ಸದಸ್ಯರು, ಊರವರು ಉಪಸ್ಥಿತರಿದ್ದರು.

ಡಿ.30ರಂದು ಪುಣ್ಯಾಹವಾಚನ, ಅಗ್ನಿಮಥನ ಜನನ, ಮಹಾಚಂಡಿಕ ಯಾಗ ನಡೆಯಲಿದೆ.

ಡಿ.31ರಂದು ಬೆಳಿಗ್ಗೆ ಧರ್ಮರಸು, ದೈವ ಕೊಡಮಣಿತ್ತಾಯ, ಮಹಿಸಂದಾಯ, ಕೇತುಲ್ಲಾಯ, ಅಂಗಣ ಪಂಜುರ್ಲಿ, ಕಲ್ಲುರ್ಟಿ ಕಲ್ಕುಡ, ಕ್ಷೇತ್ರಪಾಲ ಗುಳಿಗ, ದೈವಗಳ ಭಂಡಾರ ಬರುವುದು.ಪುನರ್ ಪ್ರತಿಷ್ಠೆ, ಅಷ್ಟೋತ್ತರ ಸಹಿತ ಪರಿಕಲಶಾಭಿಷೇಕ, ದೈವಗಳಿಗೆ ಪಂಚಪರ್ವ, ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ, ದೈವಗಳ ನೇಮೋತ್ಸವ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

Exit mobile version