Site icon Suddi Belthangady

ಬುರೂಜ್ ಶಾಲೆಗೆ ರಾಷ್ಟ್ರಮಟ್ಟದ ಪ್ರಶಸ್ತಿ

ಪುಂಜಾಲಕಟ್ಟೆ: ಬುರೂಜ್ ಆಂಗ್ಲ ಮಾಧ್ಯಮ ಫ್ರೌಡಶಾಲೆ ರಝಾನಗರ ಇಲ್ಲಿಯ ವಿದ್ಯಾರ್ಥಿಗಳು ಚಿಂತನಾ ಡ್ರಾಯಿಂಗ್ ಸ್ಪರ್ಧಾ ಪರೀಕ್ಷೆಯಲ್ಲಿ ರಾಪ್ಟ್ರಮಟ್ಟದ ಪ್ರಶಸ್ತಿ ಪಡೆದಿರುತ್ತಾರೆ. ಎಂಟನೇ ತರಗತಿಯ ಗಗನ್ ರಾಜ್ ಕುಲಾಲ್ ರಾಷ್ಟ್ರ ಮಟ್ಟದಲ್ಲಿ ಪ್ರಥಮ, ಎರಡನೇ ತರಗತಿಯ ಅಬ್ದುಲ್ ಸಲಾಂ ರಾಜ್ಯ ಮಟ್ಟದಲ್ಲಿ ಪ್ರಥಮ, ಆರನೇ ತರಗತಿಯ ಅಫ್ರಾರಿಂಷಾ, ನಾಲ್ಕನೇ ತರಗತಿಯ ರೇಶ್ಮಾ ಆರ್, ಮೂರನೇ ತರಗತಿಯ ದೃತಿ ಎಸ್, ಎಲ್ ಕೆ.ಜಿಯ ಝೈಫಾ ಫಾತಿಮ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಶಾಲೆಗೆ ಹಾಗೂ ಹೆತ್ತವರಿಗೆ ಕೀರ್ತಿಯನ್ನು ತಂದಿರುತ್ತಾರೆ.

ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕವೃಂದ ಅಭಿನಂದಿಸಿದೆ.

Exit mobile version