ಕೊಕ್ಕಡ: ಕೊಕ್ಕಡ ಗ್ರಾಮ ಪಂಚಾಯತ್ ನಲ್ಲಿ ಪಿಡಿಒ ದೀಪಕ್ ಅವರು ಗ್ರಾ.ಪಂ.ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ಗೃಹಲಕ್ಷಿ ಯೋಜನೆಯ ಅಭಿಯಾನದ ಕುರಿತು ಮಾಹಿತಿ ನೀಡದೆ ಅಭಿಯಾನ ನಡೆಸುತ್ತಿದ್ದಾರೆ ಎಂದು ಗ್ರಾಮ ಪಂಚಾಯತ್ ಕಚೇರಿ ಎದುರು ಗ್ರಾ.ಪಂ.ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಇ.ಓ. ಅಥವಾ ತಾಲೂಕು ಪಂಚಾಯತ್ ಪ್ರಭಾರಿಗಳು ಬಂದು ಸಮಸ್ಯೆ ಆಲಿಸುವಂತೆ ಪಿಡಿಓ ಅವರನ್ನು ತರಾಟೆಗೆ ತೆಗೆದುಕೊಂಡರು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಬೇಬಿ, ಉಪಾಧ್ಯಕ್ಷ ಪ್ರಭಾಕರ ಗೌಡ, ಸದಸ್ಯರಾದ ಯೋಗೀಶ್, ಪವಿತ್ರಾ ಕೆ., ವನಜಾಕ್ಷಿ, ಶರತ್, ಲತಾ, ಜಾನಕಿ, ಪುರುಷೋತ್ತಮ, ಪ್ರಮೀಳಾ, ವನಿತಾ ಉಪಸ್ಥಿತರಿದ್ದರು.