ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಎರಡು ದಿನದ ರಾಜ್ಯ ಮಟ್ಟದ ವಿಜ್ಞಾನಮೇಳ ಎಕ್ಸ್ ಪೀರಿಯಾ-2k23 ಡಿ.29, 30ರಂದು ಆಯೋಜಿಸಲಾಗಿದೆ. N.I.T.K ಸುರತ್ಕಲ್‌ನ ದ.ಕ. ನಿರ್ಮಿತಿ ಕೇಂದ್ರ ಕಾರ್ಯ ನಿರ್ವಾಹಕ ನಿರ್ದೇಶಕ ರಾಜೇಂದ್ರ ಕಲ್ಬಾವಿ ರವರು ವಿಜ್ಞಾನಮೇಳ ಉದ್ಘಾಟನೆ ಮಾಡಲಿದ್ದಾರೆ.ಧರ್ಮಸ್ಥಳ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ.ಸತೀಶ್ಚಂದ್ರ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿರ್ವಹಿಸಲಿರುವರು.
ಈ ವಿಜ್ಞಾನಮೇಳದಲ್ಲಿ ರಸಪ್ರಶ್ನೆ, ಗಣಿತ ಒಗಟು, ಹ್ಯಾಕಥಾನ್, ವಿಜ್ಞಾನ ಮಾದರಿ ತಯಾರಿ, ಟ್ರೆಶರ್ ಹಂಟ್ ಮುಂತಾದ ಸ್ಪರ್ಧೆಗಳ ಜತೆಗೆ ವ್ಯಕ್ತಿತ್ವ ವಿಕಸನ ತರಬೇತಿಯೂ ನಡೆಯಲಿರುವುದು.
ದೂರದ ಊರಿನ ವಿದ್ಯಾರ್ಥಿಗಳಿಗಾಗಿ ಊಟ-ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.ಈ ಸಂದರ್ಭದಲ್ಲಿ ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಕರುನಾಡು ಕಂಡ ದಾರ್ಶನಿಕರ ಗತವೈಭವ ಎಂಬ ಹೊನಲು ಬೆಳಕಿನ ದೃಶ್ಯರೂಪಕವನ್ನು ಪ್ರದರ್ಶಿಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಡಾ. ರವೀಶ್‌ಪಡುಮಲೆ 9008072628, ಪ್ರೋ ಪ್ರತಾಪ್‌ಚಂದ್ರ 9964025500 ಇವರನ್ನು ಸಂಪರ್ಕಿಸಲು ಕೋರಲಾಗಿದೆ.