Site icon Suddi Belthangady

ಮಾಲಾಡಿ: ಬಿಎಂ ಆಟೋ ರಿಕ್ಷಾ ಚಾಲಕ-ಮಾಲಕರ ಸಂಘದ ಮಹಾಸಭೆ

ಮಡಂತ್ಯಾರು: ಬಿಎಂ ಆಟೋ ರಿಕ್ಷಾ ಚಾಲಕ ಮಾಲಕರ ಸಂಘ ಮಾಲಾಡಿ ಇದರ ಮಹಾಸಭೆಯು ಎಸ್ ಕೆ ಸಭಾಭವನ ಮಾಲಾಡಿ ಇದರಲ್ಲಿ ಸಂಘದ ಅಧ್ಯಕ್ಷ ಮೊಹಮ್ಮದ್ ರಫೀಕ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಉದ್ಘಾಟಕರಾಗಿ ನಂದಕುಮಾರ್ ಪೋಲಿಸ್ ಉಪ ನಿರೀಕ್ಷಕರು ಪುಂಜಾಲಕಟ್ಟೆ ಠಾಣೆ, ಮುಖ್ಯ ಅತಿಥಿಗಳಾಗಿ ಮಾಲಾಡಿ ಗ್ರಾ.ಪಂ ಮಾಜಿ ಅಧ್ಯಕ್ಷ, ಮಡಂತ್ಯಾರು ಕೃಷಿ ಪತ್ತಿನ ಸಹಕಾರಿ ಸಂಘ ನಿರ್ದೇಶಕ ಪದ್ಮನಾಥ್ ಸಾಲಿಯನ್ ಹಾಗೂ ಕೆಪಿಸಿಸ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ, ಮಡಂತ್ಯಾರು ಕೃಷಿ ಪತ್ತಿನ ಸಹಕಾರಿ ಸಂಘ ನಿರ್ದೇಶಕ ಅಬ್ದುಲ್ ರಹಮಾನ್ ಪಡುಪು, ರಘು ಕೆ ಆರ್ ಬಂಗೇರ, ಬಿ ಎಂ ಆಟೋ ರಿಕ್ಷಾ ಮಾಲಕರ ಸಂಘದ ಮಾಜಿ ಅಧ್ಯಕ್ಷ ಸುಲೇಮಾನ್ ಮುಂಡಾಡಿ ಉಪಸ್ಥಿತರಿದ್ದರು.

ಇಲ್ಯಾಸ್ ಬಸವನಗುಡಿ ಇವರು ಸ್ವಾಗತಿಸಿದರು.ಶೇಕ್ ಸುಲೇಮಾನ್ ಇವರು ವಾರ್ಷಿಕ ವರದಿಯನ್ನು ಓದಿ ಹೇಳಿದರು ಹಾಗೂ 24ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು.

ಗೌರವಾಧ್ಯಕ್ಷರಾಗಿ ಅಬ್ದುಲ್ ರಹಮಾನ್ ಪಡುಪು, ಅಧ್ಯಕ್ಷರಾಗಿ ಶೇಕ್ ಸುಲೇಮಾನ್ ಮಾಲಾಡಿ, ಉಪಾಧ್ಯಕ್ಷರಾಗಿ ರಮೇಶ್ ಬಳ್ಳಮಂಜ, ಕಾರ್ಯದರ್ಶಿಯಾಗಿ ಇಲ್ಯಾಸ್ ಬಸವನಗುಡಿ, ಜೊತೆ ಕಾರ್ಯದರ್ಶಿಯಾಗಿ ಸಮೀರ್ ಯುಬಿ, ಖಜಾಂಜಿಯಾಗಿ ಸುರೇಶ್ ಬಳ್ಳಮಂಜ, ಲೆಕ್ಕಪರಿಶೋಧಕರಾಗಿ ಕಲಂದರ್ ಶಾಪಿ ಪಣಕಜೆ, ಜೊತೆ ಲೆಕ್ಕಪರಿಶೋಧಕರಾಗಿ ಸಿರಾಜ್ ಬಸವನಗುಡಿ, ಸಲಹೆಗಾರರಾಗಿ ರಘು ಕೆ ಆರ್ ಬಂಗೇರ ಹಾಗೂ ಸುಲೇಮಾನ್ ಮುಂಡಾಡಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಮೀನ್ ಮಾಲಾಡಿ, ಸುದೀಪ್, ಅಬ್ದುಲ್ ರಜಾಕ್, ಇರ್ಫಾನ್, ರಫೀಕ್ ಮಾಲಾಡಿ, ನಾಸಿರ್ ಬಂಗೇರಕಟ್ಟೆ, ಅಜೀಜ್ ಮಾಲಾಡಿ, ಅಶ್ರಫ್ ಕೊಡಿಯಾಲ್, ಅಶೋಕ್ ಬಂಗೇರಕಟ್ಟೆ, ಆತಿಫ್ ಅಲ್ತಾಫ್ ಇವರನ್ನು ಆಯ್ಕೆ ಮಾಡಲಾಯಿತು.

Exit mobile version