ಇಂದಬೆಟ್ಟು: ಧರ್ಮಸ್ಥಳ ಗ್ರಾಮದ ಪಾಂಗಾಳ ನಿವಾಸಿ ಕು.ಸೌಜನ್ಯಳ ಅತ್ಯಾಚಾರ ಕೊಲೆ ಪ್ರಕರಣದ ಮರು ತನಿಖೆಗೆ ಒತ್ತಾಯಿಸಿ ಬೃಹತ್ ಜನಾಂದೋಲನ ಸಭೆಯು ಡಿ.25 ರಂದು ಇಂದಬೆಟ್ಟು ರಿಕ್ಷಾ ಪಾರ್ಕಿಂಗ್ ಬಳಿ ನಡೆಯಿತು.
ಲಾಯಿಲದಿಂದ ಇಂದಬೆಟ್ಟುವರೆಗೆ ನೂರಾರು ವಾಹನ ಜಾತದ ಮೂಲಕ ಹೋರಾಟಗಾರರನ್ನು ಕಾರ್ಯಕರ್ತರು ಬರಮಾಡಿಕೊಂಡರು.
ಸೌಜನ್ಯಾಳಿಗೆ ಪುಷ್ಪಾರ್ಚನೆ ಮಾಡಿ ದೀಪ ಪ್ರಜ್ವಲಿಸುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಿ, ಸಾರ್ವಜನಿಕರು ರಕ್ತ ಹಸ್ತಾಕ್ಷರ ಅಭಿಯಾನಕ್ಕೆ ಚಾಲನೆ ಹಾಗೂ ಹೃದಯಘಾತದಿಂದ ಮೃತಪಟ್ಟ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತ ಪುರಂದರ ಇವರ ಆತ್ಮಕ್ಕೆ ಶಾಂತಿಯನ್ನು ಕೋರಿ ಒಂದು ನಿಮಿಷ ಮೌನಚರಣೆ ಮಾಡಲಾಯಿತು.
ವೇದಿಕೆಯಲ್ಲಿ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿ, ನಿವೃತ್ತ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟನವರ್, ತುಳುನಾಡ ದೈವರಾಧನೆ ವಿಮರ್ಷಕ ತಮ್ಮಣ್ಣ ಶೆಟ್ಟಿ, ಸಾಮಾಜಿಕ ಹೋರಾಟಗಾರ್ತಿ ಪ್ರಸನ್ನ ರವಿ, ಸೌಜನ್ಯಳ ತಾಯಿ ಕುಸುಮಾವತಿ ಚಂದಪ್ಪ ಗೌಡ, ಸಾಮಾಜಿಕ ಹೋರಾಟಗಾರ್ತಿ ಎಲಿಯಾ ಬಂಗಾಡಿ, ಧರ್ಮಗುರು ಅಬ್ದುಲ್ ಅಜೀಝ್ ಜುಹರಿ ಕಿಲ್ಲೂರು, ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಬೆಳ್ತಂಗಡಿ ಇದರ ಅಧ್ಯಕ್ಷ ಅನಿಲ್ ಕುಮಾರ್ ಅಂತರ, ಸೌಜನ್ಯ ನ್ಯಾಯಪರ ಹೋರಾಟ ಸಮಿತಿ ಇಂದಬೆಟ್ಟು ಇದರ ಅಧ್ಯಕ್ಷ ಅರುಣ್ ಕುಮಾರ್ ಕಲ್ಲಾಜೆ, ರಾಜ್ಯ ನೀತಿ ತಂಡದ ಅಧ್ಯಕ್ಷ ಜಯಂತ್ ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಚಂದ್ರಶೇಖರ್ ಇಂದಬೆಟ್ಟು ಸ್ವಾಗತಿಸಿದರು.