ಕಳೆಂಜ: ಕ್ರಿಶ್ಚಿಯನ್ ಬ್ರದರ್ಸ್ ಕಳೆಂಜ ಇವರ ಪ್ರಾಯೋಜಕತ್ವದಲ್ಲಿ ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಹೊನಲು ಬೆಳಕಿನ ಪುರುಷರ ಹಗ್ಗ ಜಗ್ಗಾಟ ಮತ್ತು ವಾಲಿಬಾಲ್ ಪಂದ್ಯಾಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಯರ್ತಡ್ಕದ ಆಟದ ಮೈದಾನದಲ್ಲಿ ನಡೆಯುತ್ತಿದ್ದು, ಉದ್ಘಾಟನೆಯನ್ನು ಧರ್ಮಸ್ಥಳ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಅನಿಲ್ ಕುಮಾರ್ ನೆರವೇರಿಸಿ, ಆಟಗಾರರಿಗೆ ಶುಭಕೋರಿದರು.
ಸಭೆಯ ಅಧ್ಯಕ್ಷತೆಯನ್ನು ಕ್ರಿಶ್ಚಿಯನ್ ಬ್ರದರ್ಸ್ ಕಳೆಂಜ ಇದರ ಅಧ್ಯಕ್ಷರಾದ ಜೋಸೆಫ್ ಕೆ.ಡಿ ವಹಿಸಿ ಆಟಗಾರರಿಗೆ ಶುಭಕೋರಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ರೇ.ಫಾ ಜೋಸೆಫ್ ವಾಳೂಕಾರನ್ (ಧರ್ಮಗುರುಗಳು ಕಳೆಂಜ ಮತ್ತು ಬಟ್ಯಾಲ್ ಚರ್ಚ್),ಕೃಷ್ಣಪ್ಪ (ಮುಖ್ಯೋಪಾಧ್ಯಾಯರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಳೆಂಜ), ಮಂಜುನಾಥ್ ಗೌಡ ಹಾರಿತ್ತಕಜೆ (ಉಪಾಧ್ಯಕ್ಷರು ಗ್ರಾ.ಪಂ ಕಳೆಂಜ) ಸಬಾಷ್ಟಿನ್ ಪಿ.ಟಿ (ಸ್ಥಾಪಕ ಮತ್ತು ಗೌರವಾಧ್ಯಕ್ಷರು ಕ್ರಿಶ್ಚಿಯನ್ ಬ್ರದರ್ಸ್ ಕಳೆಂಜ ಉಪಸ್ಥಿತರಿದ್ದರು.
ತದನಂತರ ಕ್ರೈಸ್ತ ಸಮುದಾಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ವಿಶೇಷವಾಗಿ ಸಾಧನೆಗೈದ ಕುಂಞಿಮ್ಮ(ನಿವೃತ್ತ ಮುಖ್ಯೋಪಾಧ್ಯಾಯರು ಸ.ಹಿ.ಪ್ರಾ ಶಾಲೆ ಕಳೆಂಜ), ಮೇರಿ ಎನ್.ಜೆ (ಸಹಶಿಕ್ಷಕರು ಸ.ಹಿ.ಪ್ರಾ ಶಾಲೆ ಕಳೆಂಜ), ರೋಸಮ್ಮ ವಿ.ಟಿ (ಸಹಶಿಕ್ಷಕರು ಸ.ಹಿ.ಪ್ರಾ ಶಾಲೆ ಕಳೆಂಜ), ತ್ರೆಸಿಯ (ಸಹಶಿಕ್ಷಕರು ಸ.ಹಿ.ಪ್ರಾ ಶಾಲೆ ಕಳೆಂಜ), ಎಲಿಯಮ್ಮ ಪಿ.ಟಿ (ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಶಾಲೆತ್ತಡ್ಕ), ಆಡ್ಲಿನ್ ಎಲಿಜಬೆತ್ ಜೆರಿನ್ (ರಾಜ್ಯ ಮಟ್ಟದ ಕರಾಟೆ ಪಟು ದಿವ್ಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆ ಕಾಯರ್ತಡ್ಕ) ರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಾರ್ಥನೆ ನವ್ಯ,ದಿವ್ಯ,ಜಾಸ್ಮಿನ್ ಮತ್ತು ಸ್ವಾಗತ ಭಾಷಣ ಜೈಸನ್ ಪಿ ಎಸ್ ಹಾಗೂ ಪ್ರಾಸ್ತಾವಿಕ ಭಾಷಣವನ್ನು ಸಬಾಸ್ಟಿನ್ ಪಿ.ಟಿ ನೆರವೇರಿಸಿದರು.