Site icon Suddi Belthangady

ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸಂಘದ ವಾರ್ಷಿಕ ಮಹಾಸಭೆ

ಬೆಳ್ತಂಗಡಿ: ನಮ್ಮ ಸಂಪಾದನೆಯಲ್ಲಿ ಸ್ವಲ್ಪ ಭಾಗವನ್ನು ಸಮಾಜಕ್ಕೆ ಸಮರ್ಪಸುವುದರಿಂದ ಸಮಾಜ ಅಭಿವೃದ್ಧಿಯಾಗುತ್ತದೆ ಎಂದು ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸಂಘದ ಅಧ್ಯಕ್ಷ ಬಾಲಕೃಷ್ಣ ಗೌಡ ಕೇರಿಮಾರು ಹೇಳಿದರು.

ಅವರು ಉಜಿರೆಯ ಎಸ್.ಪಿ.ಆಯಿಲ್ ಮಿಲ್‌ನ ವಠಾರದಲ್ಲಿ ಡಿ.24ರಂದು ನಡೆದ ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಮುಂದೆ ಸಾಧಿಸಬೇಕಾದುದು ಬಹಳಷ್ಟು ಇದೆ.ಸಹಕಾರದ ಅನುದಾನ ಪಡೆದು ಒಕ್ಕಲಿಗ ಸಮುದಾಯ ಭವನ ಕಟ್ಟಡ ಶಿಲಾನ್ಯಾಲ ಮಾಡಲಾಗುತ್ತದೆ ಎಂದು ತಿಳಿಸಿದರು.

ಕಾಲಭೈರವೇಶ್ವರ ಒಕ್ಕಲಿಗ ಸಹಕಾರಿ ಸಂಘದ ಅಧ್ಯಕ್ಷ ರಂಜನ್ ಜಿ.ಗೌಡ ಮಾತನಾಡಿ, ಸಂಘದ ಅಭಿವೃದ್ಧಿಗೆ ಸಮಾಜ ಭಾಂದವರ ಸಹಕಾರ ಇದೆ.ಮುಂದೆಯೂ ಅಭಿವೃದ್ಧಿ ಕಾರ್ಯಗಳತ್ತ ಶ್ರಮ ವಹಿಸಬೇಕು.ಈ ಮೂಲಕ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಸಂಘಟನೆಯನ್ನು ಪ್ರಬಲಗೊಳಿಸುವಲ್ಲಿ ಸಕ್ರಿಯರಾಗಬೇಕು ಎಂದು ಹೇಳಿದರು.

ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡ ಮಹಿಳಾ ವೇದಿಕೆ ಅಧ್ಯಕ್ಷೆ ಅಪರ್ಣ ಶಿವಕಾಂತ ಗೌಡ, ಒಕ್ಕಲಿಗ ಗೌಡ ಯುವ ವೇದಿಕೆ ಅಧ್ಯಕ್ಷರಾದ ಅನುಪಮಾ ಸತೀಶ್ ಗೌಡ, ದಾಮೋದರ ಗೌಡ ಸುರುಳಿ, ಸೌಮ್ಯಲತ ಜಯಂತ ಗೌಡ, ಸಂಘದ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಗೌಡ ಕಲ್ಲಾಜೆ ಉಪಸ್ಥಿತರಿದ್ದರು.

ಮಮತಾ ಶಿವರಾಮ ಗೌಡ, ಅನುಪಮಾ ಸತೀಶ್ ಗೌಡ ಇವರು ಪ್ರಾರ್ಥನೆ ಮಾಡಿದರು.ವಾರಿಜ ಸುಂದರ ಗೌಡ ಇಚ್ಚಿಲ ಸ್ವಾಗತಿಸಿದರು. ಬಾಲಕೃಷ್ಣ ಗೌಡ ಕಲ್ಲಾಜೆ ವಾರ್ಷಿಕ ವರದಿ ವಾಚಿಸಿದರು.ಸಂಘದ ಕೋಶಾಧಿಕಾರಿ ದಿನೇಶ್ ಗೌಡ ಕಲ್ಲಾಜೆ ಲೆಕ್ಕಪತ್ರ ಮಂಡನೆ ಮಾಡಿದರು.ಸಂಘಕ್ಕೆ ಹೊಸದಾಗಿ ಆಯ್ಕೆಯಾದ ಸಮಿತಿ ಸದಸ್ಯರನ್ನು ಗೌರವಿಸಲಾಯಿತು.ಸುರೇಶ್ ಗೌಡ ಕೂಡಿಗೆ, ವಿಜಯ ಗೌಡ ಕಲ್ಲಲಿಕೆ, ಧರ್ಮರಾಜ ಗೌಡ ಅಡ್ಕಡಿ ಸಂಘದ ಅಭಿವೃದ್ಧಿ ಬಗ್ಗೆ ಸಲಹೆ ನೀಡಿದರು. ಭರತ್ ಗೌಡ ಹಾನಿಬೆಟ್ಟು ವಂದಿಸಿದರು.ಪ್ರಮೋದ್ ಗೌಡ ಅಲೆಕ್ಕಿ ಮತ್ತು ನಿತಿನ್ ಗೌಡ ಸುರುಳಿ ನಿರೂಪಿಸಿದರು.

Exit mobile version